ಬೇಸಿಗೆ ಕಾಲದಲ್ಲಿ ಮನೆಗಳಲ್ಲಿ ಫ್ರಿಡ್ಜ್‌ನ್ನು ಹೆಚ್ಚು ಬಳಸುವುದು ಸಾಮಾನ್ಯ. ಆದರೆ ಇದೇ ಸಮಯದಲ್ಲಿ ಫ್ರಿಡ್ಜ್ ಹೆಚ್ಚು ಬಿಸಿಯಾಗುವುದು, ಗ್ಯಾಸಿನ ಒತ್ತಡ ಹೆಚ್ಚಾಗುವುದು ಹಾಗೂ ವಿದ್ಯುತ್ ಸಮಸ್ಯೆಗಳು ಉಂಟಾಗುವುದು ಕೆಲವೊಮ್ಮೆ ಅಪಾಯಕ್ಕೆ ಕಾರಣವಾಗಬಹುದು. ಫ್ರಿಡ್ಜ್ ಬ್ಲಾಸ್ಟ್ ಆಗೋದು ಸಾಮಾನ್ಯವಾಗಿ ಒಳಗಿನ ಕಂಪ್ರೆಸರ್, ಕ್ಯಾಪಾಸಿಟರ್ ಅಥವಾ ರೆಫ್ರಿಜರಂಟ್ ಲೀಕ್‌ನಿಂದ ಉಂಟಾಗುವ ತೀವ್ರ ದೋಷವಾಗಿರುತ್ತದೆ. ಇಲ್ಲಿವೆ ಪ್ರಮುಖ ಕಾರಣಗಳು:
ಹೊರಗಿನ ತಾಪಮಾನ ಹೆಚ್ಚು ಇರುವುದು
ಬೇಸಿಗೆಯಲ್ಲಿ ಕೊಠಡಿಯ ಉಷ್ಣಾಂಶ ಹೆಚ್ಚಿರುವುದರಿಂದ ಫ್ರಿಡ್ಜ್ ಕಂಪ್ರೆಸರ್ ಹೆಚ್ಚು ಸಮಯ ನಿರಂತರವಾಗಿ ಕೆಲಸ ಮಾಡುತ್ತದೆ. ಇದರಿಂದ ಅದು ಅತಿಯಾಗಿ ಬಿಸಿಯಾಗುವ ಸಾಧ್ಯತೆ ಇರುತ್ತದೆ.
ವೋಲ್ಟೇಜ್ ಫ್ಲಕ್ಚುವೇಶನ್
ಬೇಸಿಗೆಯಲ್ಲಿ ಎಸಿ, ಕೂಲರ್‌ಗಳ ಬಳಕೆ ಹೆಚ್ಚುವುದರಿಂದ ವಿದ್ಯುತ್ ಒತ್ತಡದಲ್ಲಿ ಏರಿಳಿತ ಉಂಟಾಗಬಹುದು. ಇದರಿಂದ ಫ್ರಿಡ್ಜ್‌ನ ಮೋಟಾರ್ ಅಥವಾ ಕ್ಯಾಪಾಸಿಟರ್ ಹಾನಿಯಾಗಬಹುದು.
ಇದನ್ನೂ ಓದಿ:
ಹಿಂಭಾಗದಲ್ಲಿ ಗಾಳಿ ಹರಿವಿಲ್ಲದಿರುವುದು
ಫ್ರಿಡ್ಜ್ ಅನ್ನು ಗೋಡೆಗೆ ತುಂಬ ಹತ್ತಿರ ಇಟ್ಟರೆ ಹಿಂಭಾಗದ ಕಾಯಿಲ್‌ಗಳಿಗೆ ಗಾಳಿ ಸರಿಯಾಗಿ ಸಿಗುವುದಿಲ್ಲ. ಇದರಿಂದ ಹೀಟ್ ಹೊರಬರದೇ ಒಳಗೆ ಒತ್ತಡ ಹೆಚ್ಚಾಗುತ್ತದೆ.
ಹಳೆಯ ವೈರಿಂಗ್ ಅಥವಾ ಸಡಿಲ ಪ್ಲಗ್
ಹಳೆಯ ಪ್ಲಗ್, ಸುಟ್ಟ ವೈರ್ ಅಥವಾ ಸಡಿಲ ಸಾಕೆಟ್ ಸ್ಪಾರ್ಕ್ ಉಂಟುಮಾಡಿ ಬೆಂಕಿ ಅಥವಾ ಸ್ಫೋಟದಂತ ಅಪಾಯಕ್ಕೆ ಕಾರಣವಾಗಬಹುದು.
ಗ್ಯಾಸಿನ ಲೀಕ್
ರೆಫ್ರಿಜರಂಟ್ ಲೀಕ್ ಇದ್ದರೆ ಅದು ಕೆಲವೊಮ್ಮೆ ಸ್ಪಾರ್ಕ್‌ಗೆ ತಗುಲಿ ಅಪಾಯ ಉಂಟುಮಾಡಬಹುದು.
ಸೇಫ್ಟಿ ಟಿಪ್:
ಫ್ರಿಡ್ಜ್ ಹಿಂಭಾಗ ಸ್ವಚ್ಛವಾಗಿರಲಿ, ಸ್ಟೆಬಿಲೈಸರ್ ಬಳಸಿ, ಪ್ಲಗ್ ಮತ್ತು ವೈರ್‌ಗಳನ್ನು ನಿಯಮಿತವಾಗಿ ಪರಿಶೀಲಿಸಿ.



