ಎಲ್ಲವನ್ನೂ ತಕ್ಷಣವೇ ಸಾಧಿಸಬೇಕೆಂಬ ಹಂಬಲ ನಮ್ಮನ್ನು ಆತುರದ ನಿರ್ಧಾರಗಳತ್ತ ದೂಡುತ್ತಿದೆ. ಆದರೆ, ಒಂದು ಕ್ಷಣದ ಆತುರವು ಇಡೀ ಜೀವನದ ನೆಮ್ಮದಿಯನ್ನು ಕೆಡಿಸಬಹುದು ಎಂಬುದು ಕಟು ಸತ್ಯ. ವೈಯಕ್ತಿಕ ಬದುಕು ಇರಲಿ ಅಥವಾ ವೃತ್ತಿಜೀವನ ಇರಲಿ, ಸರಿಯಾದ ಚಿಂತನೆ ಇಲ್ಲದೆ ತೆಗೆದುಕೊಳ್ಳುವ ತೀರ್ಮಾನಗಳು ನಂತರದ ದಿನಗಳಲ್ಲಿ ಕೇವಲ ಪಶ್ಚಾತ್ತಾಪಕ್ಕೆ ದಾರಿಯಾಗುತ್ತದೆ.
ಯಾವುದೇ ವಿಷಯದ ಬಗ್ಗೆ ಪೂರ್ಣ ಮಾಹಿತಿ ಇಲ್ಲದೆ ಅಥವಾ ಭಾವೋದ್ವೇಗಕ್ಕೆ ಒಳಗಾಗಿ ನಿರ್ಧಾರ ಕೈಗೊಳ್ಳುವುದು ಅಪಾಯಕಾರಿ. ಇದು ಆರ್ಥಿಕ ನಷ್ಟ ಮಾತ್ರವಲ್ಲದೆ ಮಾನಸಿಕ ನೆಮ್ಮದಿಯನ್ನೂ ಕಸಿದುಕೊಳ್ಳಬಹುದು. ಹಿರಿಯರು ಹೇಳುವಂತೆ “ಆತುರಗಾರನಿಗೆ ಬುದ್ಧಿ ಕಡಿಮೆ” ಎಂಬ ಮಾತನ್ನು ನಾವು ಸದಾ ನೆನಪಿನಲ್ಲಿಡಬೇಕು.
ಯಾವುದೇ ದೊಡ್ಡ ನಿರ್ಧಾರ ತೆಗೆದುಕೊಳ್ಳುವ ಮೊದಲು ಕನಿಷ್ಠ 24 ಗಂಟೆಗಳ ಕಾಲ ಯೋಚಿಸಿ. ನೀವು ತಗೊಳ್ಳುವ ನಿರ್ಧಾರದಿಂದ ಮುಂದಾಗುವ ಲಾಭ ಮತ್ತು ನಷ್ಟಗಳ ಪಟ್ಟಿಯನ್ನು ಸಿದ್ಧಪಡಿಸಿ. ಆಪ್ತರು ಅಥವಾ ಆ ವಿಷಯದ ಬಗ್ಗೆ ಜ್ಞಾನವಿರುವವರ ಜೊತೆ ಚರ್ಚಿಸಿ.
ನೆನಪಿರಲಿ.. ಬಿದ್ದ ಮೇಲೆ ಎಚ್ಚರಗೊಳ್ಳುವುದಕ್ಕಿಂತ, ಬೀಳುವ ಮುನ್ನ ಎಚ್ಚರದಿಂದ ಹೆಜ್ಜೆ ಇಡುವುದು ಜಾಣತನ.



