ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಯಕ ಶುಭ್ಮನ್ ಗಿಲ್ ,ಬಟ್ಲರ್ ಹಾಗೂ ವಾಷಿಂಗ್ಟನ್ ಸುಂದರ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗುಜರಾತ್ ಟೈಟನ್ಸ್ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 210 ರನ್ಗಳ ಬೃಹತ್ ಮೊತ್ತ ಕಲೆ ಹಾಕಿದೆ.
ಟಾಸ್ ಸೋತು ಬ್ಯಾಟಿಂಗ್ ಇಳಿದಿದ್ದ ಟೈಟನ್ಸ್ ಪರ ಸಾಯಿ ಸುದರ್ಶನ್ 12 ರನ್ ಗಳಿಸಿ ವಿಕೆಟ್ ನೀಡಿದರು. ಬಳಿಕ ಜೊತೆಯಾದ ಬಟ್ಲರ್, ಗಿಲ್ ತಂಡದ ರನ್ ಹೆಚ್ಚಿಸಿದರು.
ಬಟ್ಲರ್ 52 ರನ್ಗಳಿಸಿ ಬೌಲ್ಡ್ ಆದರು.
ಬಳಿಕ ಸುಂದರ್, ನಾಯಕ ಗಿಲ್ ಜೊತೆಗೂಡಿ104 ರನ್ಗಳ ಜೊತೆಯಾಟ ನೀಡಿದರು. ಗಿಲ್ ೭೦ ರನ್ ಗೆ ಕ್ಯಾಚ್ ನೀಡಿ ಔಟ್ ಆದರು. ಸುಂದರ್ 55 ರನ್ಗಳಿಸಿ ಕೊನೆಯ ಓವರ್ನಲ್ಲಿ ಮುಖೇಶ್ ಕುಮಾರ್ಗೆ ವಿಕೆಟ್ ಒಪ್ಪಿಸಿದರು. ಗ್ಲೆನ್ ಫಿಲಿಪ್ಸ್ ಅಜೇಯ 14, ತೆವಾಟಿಯಾ ಅಜೇಯ 1 ರನ್ಗಳಿಸಿದರು.



