April 9, 2026
Thursday, April 9, 2026
spot_img

ಒಪ್ಪಂದ ಮುರಿಯೋಕೆ ಪ್ರಯತ್ನ ಪಟ್ಟರೆ ಅಷ್ಟೇ ಕಥೆ….! ದೊಡ್ಡಣ್ಣನ ಕಡೆಯಿಂದ ಖಡಕ್ ವಾರ್ನಿಂಗ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕ ಮತ್ತು ಇರಾನ್ ನಡುವೆ ತಾತ್ಕಾಲಿಕ ಕದನ ವಿರಾಮ ಜಾರಿಯಾದ ಬೆನ್ನಲ್ಲೇ ಪರಿಸ್ಥಿತಿ ಮತ್ತೊಮ್ಮೆ ಉದ್ವಿಗ್ನತೆಯತ್ತ ಸಾಗುವ ಲಕ್ಷಣಗಳು ಕಾಣಿಸುತ್ತಿವೆ. ಇದರ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ತೀವ್ರ ಎಚ್ಚರಿಕೆ ಸಂದೇಶ ರವಾನಿಸಿದ್ದು, ಒಪ್ಪಂದವನ್ನು ಉಲ್ಲಂಘಿಸಿದರೆ ಹಿಂದೆಂದೂ ಕಂಡಿರದ ಮಟ್ಟದ ದಾಳಿ ನಡೆಯಲಿದೆ ಎಂದು ಹೇಳಿದ್ದಾರೆ.

ಎರಡು ವಾರಗಳ ಷರತ್ತುಬದ್ಧ ಕದನ ವಿರಾಮದ ಅವಧಿಯಲ್ಲಿ ಹಾರ್ಮುಜ್ ಜಲಸಂಧಿ ಮೂಲಕ ಹಡಗು ಸಂಚಾರ ಸುರಕ್ಷಿತವಾಗಿ ಮುಂದುವರಿಯಲಿದೆ ಎಂದು ಅಮೆರಿಕ ತಿಳಿಸಿದೆ. ಇದೇ ವೇಳೆ, ಶಾಂತಿ ಒಪ್ಪಂದವನ್ನು ಗೌರವಿಸುವವರೆಗೆ ಪ್ರದೇಶದಲ್ಲಿ ಸ್ಥಿರತೆ ಕಾಪಾಡಲಾಗುತ್ತದೆ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಆದರೆ, ಒಪ್ಪಂದ ಮುರಿದರೆ ಅಮೆರಿಕದ ಸೇನೆ ತಕ್ಷಣ ಕಠಿಣ ಕ್ರಮ ಕೈಗೊಳ್ಳಲಿದೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.

ಇದನ್ನೂ ಓದಿ:

ಏಪ್ರಿಲ್ 7ರಂದು ಜಾರಿಯಾದ 14 ದಿನಗಳ ಕದನ ವಿರಾಮವು ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆಗಳ ಫಲಿತಾಂಶವಾಗಿದ್ದು, ಇರಾನ್ ಮುಂದಿಟ್ಟ 10 ಅಂಶಗಳ ಪ್ರಸ್ತಾವನೆ ಶಾಶ್ವತ ಶಾಂತಿ ಚರ್ಚೆಗೆ ಆಧಾರವಾಗಬಹುದು ಎಂದು ವರದಿಗಳು ಸೂಚಿಸಿವೆ. ಈ ಅವಧಿಯಲ್ಲಿ ದೀರ್ಘಕಾಲಿಕ ಶಾಂತಿ ಒಪ್ಪಂದದ ಕುರಿತು ಅಂತಿಮ ಚರ್ಚೆಗಳು ನಡೆಯಲಿವೆ.

ಇದೀಗ ಜಾಗತಿಕ ಮಟ್ಟದಲ್ಲಿ ಎಲ್ಲರ ಗಮನ ಈ ಎರಡು ವಾರಗಳ ಮೇಲಿದ್ದು, ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಕಡಿಮೆಯಾಗುತ್ತದೆಯೇ ಅಥವಾ ಮತ್ತೆ ಯುದ್ಧದ ವಾತಾವರಣ ನಿರ್ಮಾಣವಾಗುತ್ತದೆಯೇ ಎಂಬ ಕುತೂಹಲ ಹೆಚ್ಚಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !