April 11, 2026
Saturday, April 11, 2026
spot_img

Dear Vaibhav, ಸೂರ್ಯವಂಶಿಯನ್ನು ಹೊಗಳಿ ಕೊಂಡಾಡಿದ ವಿರಾಟ್‌ ಕೊಹ್ಲಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬೌಂಡರಿ, ಸಿಕ್ಸರ್‌ಗಳ ಮೂಲಕ ಸ್ಫೋಟಕ ಬ್ಯಾಟಿಂಗ್‌ ನಡೆಸಿದ 15 ವರ್ಷದ ವೈಭವ್‌ ಸೂರ್ಯವಂಶಿಯನ್ನು ವಿರಾಟ್‌ ಕೊಹ್ಲಿ ಹೊಗಳಿ ಕೊಂಡಾಡಿದ್ದಾರೆ.

ಪಂದ್ಯ ಮುಗಿದ ನಂತರ ವಿರಾಟ್‌ ಕೊಹ್ಲಿ ವೈಭವ್‌ ಸೂರ್ಯವಂಶಿಯನ್ನು ಭೇಟಿಯಾಗಿದ್ದು, ಡಿಯರ್‌ ವೈಭವ್‌ ವೆಲ್‌ ಡನ್‌ ಎಂದು ಹೇಳಿದ್ದಾರೆ. ವೈಭರ್‌ ತನಗೊಂದು ಆಟೋಗ್ರಾಫ್‌ ಕೊಡ್ತೀರಾ ಎಂದು ಕೊಹ್ಲಿಯನ್ನು ಪ್ರಶ್ನಿಸಿದ್ದು, ವೈಭವ್‌ ಕ್ಯಾಪ್‌ ಮೇಲೆ ಕೊಹ್ಲಿ ಡಿಯರ್ ವೈಭವ್, ವೆಲ್ ಡನ್ ಎಂದು ಬರೆದು ಕೊಟ್ಟಿದ್ದಾರೆ.

ಭುವನೇಶ್ವರ್‌ ಕುಮಾರ್‌ ಓವರ್‌ನಲ್ಲಿ ತಾನೆದುರಿಸಿದ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿದ ವೈಭವ್‌, ಆ ಬಳಿಕ ಹಿಂದಿರುಗಿ ನೋಡಲೇ ಇಲ್ಲ. ಹೇಜಲ್‌ವುಡ್‌ರ ಮೊದಲ ಎಸೆತವನ್ನೇ ಬೌಂಡರಿಗಟ್ಟಿ ಆ ಓವರ್‌ನಲ್ಲಿ ಸಿಕ್ಸರ್‌ ಸಹಿತ 18 ರನ್‌ ದೋಚಿದರು. 15 ಎಸೆತಕ್ಕೆ ಅರ್ಧಶತಕ ಪೂರ್ತಿಗೊಳಿಸಿದರು. 6 ಓವರ್‌ನಲ್ಲಿ ತಂಡದ ಸ್ಕೋರ್‌ 1 ವಿಕೆಟ್‌ಗೆ 97. ಬೌಂಡರಿ, ಸಿಕ್ಸರ್‌ ಮೂಲಕವೇ ಆರ್‌ಸಿಬಿ ಬೌಲರ್‌ಗಳ ಬೆವರಿಳಿಸಿದ ವೈಭವ್, 26 ಎಸೆತಕ್ಕೆ 78 ರನ್‌ ಸಿಡಿಸಿದರು.

ಈ ಬಾರಿ ಐಪಿಎಲ್‌ನಲ್ಲಿ ವೈಭವ್‌ ಆಡಿದ 4 ಪಂದ್ಯಗಳ ಪೈಕಿ 2ರಲ್ಲಿ ತಲಾ 15 ಎಸೆತಕ್ಕೆ ಅರ್ಧಶತಕ ಬಾರಿಸಿದ್ದಾರೆ. ಇತ್ತೀಚೆಗೆ ಚೆನ್ನೈ ವಿರುದ್ಧ 15 ಎಸೆತಕ್ಕೆ 50 ರನ್‌ ಪೂರೈಸಿದ್ದರು. ಒಟ್ಟಾರೆ ಐಪಿಎಲ್‌ನಲ್ಲಿ ವೈಭವ್‌ 3 ಬಾರಿ 17 ಅಥವಾ ಅದಕ್ಕಿಂತ ಕಡಿಮೆ ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !