June 25, 2026
Thursday, June 25, 2026
spot_img

Viral | ಕ್ಯಾಬ್‌ ಬುಕ್‌ ಮಾಡಿ ಅರ್ಧಗಂಟೆ ಕಾಯಿಸಿ ಕಿರಿಕ್‌ ಮಾಡಿದ ಮಹಿಳಾಮಣಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಹಿಳೆಯೊಬ್ಬರು ಕ್ಯಾಬ್‌ ಬುಕ್‌ ಮಾಡಿ ಅರ್ಧಗಂಟೆ ಕಾಯಿಸಿದ್ದಷ್ಟೇ ಅಲ್ಲದೇ ಕಿರಿಕ್‌ ಕೂಡ ಮಾಡಿದ ಘಟನೆ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ನಡೆದಿದೆ.

ಮಹಿಳೆಯೊಬ್ಬರು ಕ್ಯಾಬ್‌ ಬುಕ್‌ ಮಾಡಿದ್ದಾರೆ. ಅದಾದ ನಂತರ ಅರ್ಧ ಗಂಟೆ ಕಾಯಿಸಿದ್ದಾರೆ. ಸ್ಥಳಕ್ಕೆ ಬಂದ ಚಾಲಕ ಮೂರು ಬಾರಿ ಕರೆ ಮಾಡಿದ್ದಾರೆ. ಇಲ್ಲೇ ಇದೀನಿ ಬಂದೆ ಬಂದೆ ಎನ್ನುತ್ತಲೇ ಅರ್ಧಗಂಟೆಯಾಗಿದೆ.

ಇಷ್ಟು ಲೇಟಾಗಿ ಬಂದ್ರಿ ಎಂದು ಕ್ಯಾಬ್‌ ಚಾಲಕ ಕೇಳಿದ್ದಾರೆ. ಅದಕ್ಕೆ ನಿಮ್ಮ ಜೊತೆ ಬರೋದಕ್ಕೆ ನನಗೆ ಸೇಫ್‌ ಅನಿಸ್ತಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ. ಕ್ಯಾಬ್ ಕ್ಯಾನ್ಸಲ್ ಮಾಡದೇ ನಮ್ಮನ್ನು ಕಾಯಿಸಿ ಕಿರಿಕ್ ಮಾಡಿದ್ದಾರೆಂದು ಮಹಿಳೆ ವಿರುದ್ಧ ಚಾಲಕ ಆರೋಪ ಮಾಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಎಲ್ಲೆಡೆ ವೈರಲ್‌ ಆಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !