August 13, 2026
Thursday, August 13, 2026
spot_img

FOOD | ಸುಡು ಬಿಸಿಲಿನ ಮಧ್ಯಾಹ್ನದ ಊಟಕ್ಕೆ ರೆಡಿ ಮಾಡಿ ತಂಪಾದ ದಹಿ ತಡ್ಕಾ

ಬೇಸಿಗೆಯ ಬಿಸಿಲಿನಲ್ಲಿ ಹೊಟ್ಟೆಗೆ ಹಗುರ, ದೇಹಕ್ಕೆ ತಂಪು, ರುಚಿಗೆ ಸೂಪರ್ ಆಗಿರೋ ಒಂದು ಸರಳ ರೆಸಿಪಿ ಅಂದ್ರೆ ದಹಿ ತಡ್ಕಾ. ಅನ್ನ, ಚಪಾತಿ, ಪರೋಟ ಯಾವುದರ ಜೊತೆಯಲ್ಲೂ ಸಖತ್ ಟೇಸ್ಟ್ ಕೊಡೋ ಈ ಡಿಶ್ ಕೇವಲ 5 ನಿಮಿಷಗಳಲ್ಲಿ ರೆಡಿ ಆಗುತ್ತದೆ.

ಬೇಕಾಗುವ ಪದಾರ್ಥಗಳು

ತಾಜಾ ಮೊಸರು – 1 ಕಪ್
ಎಣ್ಣೆ ಅಥವಾ ತುಪ್ಪ – 1 ಟೀ ಸ್ಪೂನ್
ಸಾಸಿವೆ – ½ ಟೀ ಸ್ಪೂನ್
ಜೀರಿಗೆ – ½ ಟೀ ಸ್ಪೂನ್
ಕರಿಬೇವು – 6 ರಿಂದ 8 ಎಲೆ
ಹಸಿಮೆಣಸಿನಕಾಯಿ – 1
ಒಣ ಮೆಣಸಿನಕಾಯಿ – 1
ಇಂಗು – ಚಿಟಿಕೆ
ಸಣ್ಣಗೆ ಹೆಚ್ಚಿದ ಈರುಳ್ಳಿ – 2 ಟೇಬಲ್ ಸ್ಪೂನ್
ಶೇಂಗಾ – 1 ಟೇಬಲ್ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು – ಸ್ವಲ್ಪ

ಮಾಡುವ ವಿಧಾನ

ಮೊದಲು ಒಂದು ಬೌಲ್‌ನಲ್ಲಿ ಮೊಸರನ್ನು ಚೆನ್ನಾಗಿ ಕದಡಿ. ಬೇಕಿದ್ದರೆ ಸ್ವಲ್ಪ ನೀರು ಸೇರಿಸಿ ಸ್ವಲ್ಪ ತೆಳುವಾಗಿಸಬಹುದು.

ಈಗ ಬಾಣಲೆಯಲ್ಲಿ ಎಣ್ಣೆ ಅಥವಾ ತುಪ್ಪ ಬಿಸಿ ಮಾಡಿ. ಅದಕ್ಕೆ ಸಾಸಿವೆ, ಜೀರಿಗೆ, ಕರಿಬೇವು, ಹಸಿಮೆಣಸು, ಒಣಮೆಣಸು ಮತ್ತು ಇಂಗು ಹಾಕಿ.

ಇಷ್ಟವಿದ್ದರೆ ಈರುಳ್ಳಿ ಮತ್ತು ಶೇಂಗಾ ಸೇರಿಸಿ ಸ್ವಲ್ಪ ಹುರಿಯಿರಿ. ಒಗ್ಗರಣೆ ತಣ್ಣಗಾದ ನಂತರ ಮೊಸರಿಗೆ ಹಾಕಿ, ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.

ಮೇಲೆ ಕೊತ್ತಂಬರಿ ಸೊಪ್ಪು ಹಾಕಿದರೆ ಬೇಸಿಗೆ ಮಧ್ಯಾಹ್ನದ ಲಂಚ್‌ಗೆ ಪರ್ಫೆಕ್ಟ್ ದಹಿ ತಡ್ಕಾ ರೆಡಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !