ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿ ಸಂಘರ್ಷಕ್ಕೆ ಸದ್ಯ ಕದನ ವಿರಾಮ ಘೋಷಣೆಯಾಗಿದ್ದು, ಇದರ ನಡುವೆ ಇರಾನ್ ಹಾಗೂ ಅಮೆರಿಕ ನಡುವೆ ಮಾತುಕತೆಗಾಗಿ ಪಾಕಿಸ್ತಾನದಲ್ಲಿ ವೇದಿಕೆ ಸಜ್ಜಾಗಿದೆ. ಈ ಹಿನ್ನೆಲೆ ಇಂದು ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಇಸ್ಲಾಮಾಬಾದ್ ಪ್ರಯಾಣ ಬೆಳೆಸಿದ್ದು, ಈ ವೇಳೆ ಪಾಕಿಸ್ತಾನದ ಎಫ್-16 ಫೈಟರ್ ಜೆಟ್‌ಗಳು ಬೆಂಗಾವಲಾಗಿ ಸಾಥ್ ನೀಡಿವೆ.
ಇಸ್ಲಾಮಾಬಾದ್ ಬಳಿಯ ನೂರ್ ಖಾನ್ ವಾಯುನೆಲೆಯಲ್ಲಿ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ವಿಮಾನ ಇಳಿಯುವ ವೇಳೆ ಪಾಕಿಸ್ತಾನದ ಐದು ಪಿಎಎಫ್ ಎಫ್-16 ಯುದ್ಧ ವಿಮಾನಗಳು ಬೆಂಗಾವಲು ಒದಗಿಸಿದ್ದು, ಇದರ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
1979 ರ ಇಸ್ಲಾಮಿಕ್ ಕ್ರಾಂತಿಯ ಬಳಿಕ ಅಮೆರಿಕ ಹಾಗೂ ಇರಾನ್ ಜೊತೆ ಇಂದು ಮಹತ್ವದ ಮಾತುಕತೆ ನಡೆಯುತ್ತಿದೆ.
ಅಮೆರಿಕದ ನಿಯೋಗದಲ್ಲಿ ವ್ಯಾನ್ಸ್ ಜೊತೆ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಮತ್ತು ಡೊನಾಲ್ಡ್ ಟ್ರಂಪ್ ಅವರ ಅಳಿಯ ಜೇರೆಡ್ ಕುಶ್ನರ್ ಅವರು ಸಹ ಆಗಮಿಸಿದ್ದಾರೆ.



