September 24, 2026
Thursday, September 24, 2026
spot_img

ಇಸ್ಲಾಮಾಬಾದ್ ನಲ್ಲಿ ಅಮೆರಿಕ -ಇರಾನ್ ಐತಿಹಾಸಿಕ ಮಾತುಕತೆ: ಪಾಕ್ ಗೆ ಹೊರಟ ಜೆಡಿ ವ್ಯಾನ್ಸ್ ವಿಮಾನಕ್ಕೆ ಎಫ್-16 ಎಸ್ಕಾರ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿ ಸಂಘರ್ಷಕ್ಕೆ ಸದ್ಯ ಕದನ ವಿರಾಮ ಘೋಷಣೆಯಾಗಿದ್ದು, ಇದರ ನಡುವೆ ಇರಾನ್ ಹಾಗೂ ಅಮೆರಿಕ ನಡುವೆ ಮಾತುಕತೆಗಾಗಿ ಪಾಕಿಸ್ತಾನದಲ್ಲಿ ವೇದಿಕೆ ಸಜ್ಜಾಗಿದೆ. ಈ ಹಿನ್ನೆಲೆ ಇಂದು ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಇಸ್ಲಾಮಾಬಾದ್ ಪ್ರಯಾಣ ಬೆಳೆಸಿದ್ದು, ಈ ವೇಳೆ ಪಾಕಿಸ್ತಾನದ ಎಫ್‌-16 ಫೈಟರ್‌ ಜೆಟ್‌ಗಳು ಬೆಂಗಾವಲಾಗಿ ಸಾಥ್ ನೀಡಿವೆ.

ಇಸ್ಲಾಮಾಬಾದ್ ಬಳಿಯ ನೂರ್ ಖಾನ್ ವಾಯುನೆಲೆಯಲ್ಲಿ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ವಿಮಾನ ಇಳಿಯುವ ವೇಳೆ ಪಾಕಿಸ್ತಾನದ ಐದು ಪಿಎಎಫ್ ಎಫ್-16 ಯುದ್ಧ ವಿಮಾನಗಳು ಬೆಂಗಾವಲು ಒದಗಿಸಿದ್ದು, ಇದರ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

1979 ರ ಇಸ್ಲಾಮಿಕ್ ಕ್ರಾಂತಿಯ ಬಳಿಕ ಅಮೆರಿಕ ಹಾಗೂ ಇರಾನ್ ಜೊತೆ ಇಂದು ಮಹತ್ವದ ಮಾತುಕತೆ ನಡೆಯುತ್ತಿದೆ.

ಅಮೆರಿಕದ ನಿಯೋಗದಲ್ಲಿ ವ್ಯಾನ್ಸ್ ಜೊತೆ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಮತ್ತು ಡೊನಾಲ್ಡ್ ಟ್ರಂಪ್ ಅವರ ಅಳಿಯ ಜೇರೆಡ್ ಕುಶ್ನರ್ ಅವರು ಸಹ ಆಗಮಿಸಿದ್ದಾರೆ.

Must Read