April 13, 2026
Monday, April 13, 2026
spot_img

ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ಪ್ರತಿ ಕ್ಷಣದ ಲೆಕ್ಕ ಕೇಳುತ್ತೇನೆ: ದೀದಿ ನಾಡಲ್ಲಿ ಗುಡುಗಿದ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್ :

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ 15 ವರ್ಷಗಳ ಟಿಎಂಸಿ ಸರ್ಕಾರದ ಪ್ರತಿ ಕ್ಷಣದ ಮತ್ತು ಪ್ರತಿ ಪೈಸೆಯ ಲೆಕ್ಕವನ್ನು ಪಡೆಯಲಾಗುವುದು ಎಂದು ಪ್ರಧಾನಿ ಮೋದಿ ಗುಡುಗಿದ್ದಾರೆ.

ವಿಧಾನ ಸಭಾ ಚುನಾವಣೆಗೆ ಸಿಲಿಗುರಿಯಲ್ಲಿ ಭರ್ಜರಿ ಪ್ರಚಾರ ನಡೆಸಿದ ಮೋದಿ, ಬಂಗಾಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ಈ ಬೆನ್ನಲ್ಲೇ ಟಿಎಂಸಿ ಸರ್ಕಾರದ ಕಳೆದ 15 ವರ್ಷಗಳ ಪ್ರತಿ ಲೆಕ್ಕವನ್ನು ಪಡೆಯಲಾಗುವುದು. ನಮ್ಮ ಉದ್ದೇಶ ಎಲ್ಲರ ಸರ್ವಾಗೀಣ ಅಭಿವೃದ್ದಿಯಾಗಿದ್ದು, ಆದರೆ ಬಂಗಾಳದಲ್ಲಿ ಲೂಟಿಕೋರರನ್ನು ಕಾನೂನಿನ ಅಡಿಯಲ್ಲಿ ತಂದು ಅವರಿಗೆ ಸಂಪೂರ್ಣ ಹೊಣೆಗಾರಿಕೆ ನಿಗದಿಪಡಿಸುವುದು ತಮ್ಮಮೊದಲ ಆದ್ಯತೆ ಎಂದು ಆಕ್ರೋಶ ಹೊರಹಾಕಿದರು.

ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರ ಬಂಗಾಳದಲ್ಲಿ ದೇಶವನ್ನು ವಿಭಜಿಸಲು ಸಂಚು ರೂಪಿಸುವ ತುಕ್ಡೆ ಗ್ಯಾಂಗ್ ಗೆ ಉತ್ತೇಜಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಮಹಿಳಾ ಕೇಂದ್ರಿತ ಪೊಲೀಸ್ ಬೆಂಬಲ ವ್ಯವಸ್ಥೆಗಳನ್ನು ಜಾರಿಗೆ ತರುಲಾಗುವುದು ಜೊತೆಗೆ ರಾಜಕೀಯ ಹಿಂಸಾಚಾರಕ್ಕೆ ಬ್ರೇಕ್ ಹಾಕುವ ಉದ್ದೇಶದಿಂದ ತನಿಖೆಗಾಗಿ ವಿಶೇಷ ಆಯೋಗವನ್ನು ರಚಿಸಿ, ಮಾಫಿಯಾ ಚಟುವಟಿಕೆಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪ್ರಧಾನಿ ಮೋದಿ ಹೇಳಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !