October 16, 2026
Friday, October 16, 2026
spot_img

ಬಿಸಿಗೆ ಬೆಂದ ಬೆಂಗಳೂರು ಮಂದಿ: ಬೆಳಗ್ಗೆ ಅಲ್ಲ, ರಾತ್ರಿ ಕೂಡ ಸೆಕೆನೇ….

ಹೊಸದಿಗಂತ ಡಿಜಿಟಲ್ ಡೆಸ್ಕ್:

ಒಮ್ಮೆ “ಕೂಲ್ ಸಿಟಿ” ಎಂದು ಹೆಸರಾಗಿದ್ದ ನಗರವೇ ಈಗ ಉರಿಯುವ ಬಿಸಿಯಿಂದ ಜನರನ್ನು ಕಂಗೆಡಿಸಿದೆ. ಬೆಳಿಗ್ಗೆಯಿಂದಲೇ ಕಿಡಿಕಾರುವ ಸೂರ್ಯ, ಸಂಜೆಗೂ ಕಡಿಮೆಯಾಗದ ಉಷ್ಣ, ರಾತ್ರಿ ಹೊತ್ತಿಗೂ ತಂಪಾಗದ ವಾತಾವರಣ ಇವೆಲ್ಲವೂ ನಗರ ಜೀವನವನ್ನು ಕಷ್ಟಕರವಾಗಿಸಿವೆ. ವಿಶೇಷವಾಗಿ ರಾತ್ರಿ ನಿದ್ರೆ ಸರಿಯಾಗಿ ಆಗದೇ ಜನರು ಪರದಾಡುತ್ತಿರುವುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ನಗರದಲ್ಲಿ ಪ್ರಸ್ತುತ ಹಗಲು ವೇಳೆಯಲ್ಲಿ 35ರಿಂದ 36 ಡಿಗ್ರಿವರೆಗೆ ತಾಪಮಾನ ದಾಖಲಾಗುತ್ತಿದ್ದು, ತಿಂಗಳ ಕೊನೆಯ ವಾರಕ್ಕೆ ಇದು 37ರಿಂದ 38 ಡಿಗ್ರಿವರೆಗೆ ಏರಿಕೆಯಾಗುವ ಸಾಧ್ಯತೆ ಇದೆ. ರಾತ್ರಿ ವೇಳೆಯಲ್ಲೂ 24ರಿಂದ 26 ಡಿಗ್ರಿ ನಡುವೆಯೇ ತಾಪಮಾನ ಉಳಿಯುತ್ತಿರುವುದರಿಂದ ಉಷ್ಣದ ಅಸ್ವಸ್ಥತೆ ಮುಂದುವರಿದಿದೆ.

ಇದನ್ನೂ ಓದಿ:

ಹಿಂದೆ ಹೆಚ್ಚು ಬಿಸಿಯಾದಾಗ ಮಳೆ ಸುರಿದು ವಾತಾವರಣ ತಂಪಾಗುತ್ತಿತ್ತು. ಆದರೆ ಈಗ ವಾಯು ಮಾಲಿನ್ಯ ಹಾಗೂ ಹವಾಮಾನ ವೈಪರಿತ್ಯದ ಪರಿಣಾಮವಾಗಿ ಆ ನೈಸರ್ಗಿಕ ಚಕ್ರದಲ್ಲಿ ಬದಲಾವಣೆ ಕಂಡುಬಂದಿದೆ ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮುಂದಿನ ದಿನಗಳಲ್ಲಿ ಬಿಸಿಲಿನ ತೀವ್ರತೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇರುವುದರಿಂದ, ಆರೋಗ್ಯದ ಬಗ್ಗೆ ವಿಶೇಷ ಎಚ್ಚರಿಕೆ ವಹಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ.

Must Read