ಹೊಸದಿಗಂತ ಡಿಜಿಟಲ್ ಡೆಸ್ಕ್:
ಬರೋಬ್ಬರಿ 40 ಲಕ್ಷ ರೂ ಸಂಬಳ ಇದ್ದ ಟೆಕ್ಕಿ ಇದ್ದಕ್ಕಿದ್ದಂತೆಯೇ ತನ್ನ ಕೆಲಸ ಕಳೆದುಕೊಂಡಿದ್ದು, ಮನೆಯ EMI ಕಟ್ಟೋದಕ್ಕಾಗಿ Rapido ಚಾಲಕನಾಗಿ ಬದಲಾಗಿದ್ದಾರೆ.
ತಮ್ಮ ಸಂಬಳಕ್ಕೆ ತಕ್ಕ ಲೈಫ್‌ಸ್ಟೈಲ್ ರೂಢಿಮಾಡಿಕೊಳ್ಳುವುದು ಸಾಮಾನ್ಯ. ಉತ್ತರ ಪ್ರದೇಶದ ಘಾಜಿಯಾಬಾದ್ ಮೂಲದ ಸಾಫ್ಟ್ ವೇರ್ ಎಂಜಿನಿಯರ್ ಒಬ್ಬರು ದೇಶದ ಪ್ರತಿಷ್ಟಿತ ಸಂಸ್ಥೆಯಲ್ಲಿ ಟೆಕ್ಕಿಯಾಗಿ ಉದ್ಯೋಗ ಗಿಟ್ಟಿಸಿಕೊಂಡಿದ್ದರು. ವಾರ್ಷಿಕ 40 ಲಕ್ಷ ರೂ ಸಂಬಳ. ಇನ್ನೇನು ತನ್ನ ಕಷ್ಟಗಳೆಲ್ಲಾ ದೂರಾಗಿ ಐಶಾರಾಮಿ ಜೀವನ ನಡೆಸಬಹುದು ಎಂದು ಭಾವಿಸಿದ್ದರು. ಘಾಜಿಯಾಬಾದ್ ಪ್ರತೀಕ್ ಗ್ರ್ಯಾಂಡ್ ಸಿಟಿಯಲ್ಲಿ 1.4 ಕೋಟಿ ರೂ ಮೌಲ್ಯದ 3 BHK ಅಪಾರ್ಟ್ ಮೆಂಟ್ ಕೂಡ ಖರೀದಿಸಿದ್ದರು.
ಆದರೆ ವಿಧಿಯಾಟ ಬೇರೆಯೇ ಇತ್ತು. ಇದ್ದಕ್ಕಿದ್ದಂತೆಯೇ ಕೆಲಸದಿಂದ ಅವರನ್ನು ವಜಾಮಾಡಲಾಯಿತು. ಸಾಲ, ಇಎಮ್‌ಐ, ದಿನಚರಿಗೆ ಹಣ ಇಲ್ಲದಂತಾಗಿ ಹೈರಾಣಾಗಿದ್ದರು. ಬೇರೆ ಕೆಲಸ ಕೂಡ ಸಿಗಲಿಲ್ಲ. ಆದರೆ ಕೆಲಸ ಯಾವುದಾದರೇನು ಎಂದು ಅವರು ಇದೀಗ Rapido ಚಾಲಕನಾಗಿ ಬದಲಾಗಿದ್ದಾರೆ.
ಈ ಬಗ್ಗೆ ಅವರ ಸ್ನೇಹಿತನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಸ್ನೇಹಿತನ ಜೀವನ ಬದಲಾದ ರೀತಿಗೆ ಕಣ್ಣಿರು ಸುರಿಸಿದ್ದಾರೆ. ಮನೆ ಮಾರಿಬಿಟ್ಟು ಹೊಸ ಜೀವನ ಆರಂಭಿಸಿ, ಇಲ್ಲವಾ ಮನೆಯನ್ನು ಬಾಡಿಗೆ ಕೊಟ್ಟು ನೀವು ಬಾಡಿಗೆ ಮನೆಗೆ ಹೋಗಿ ಮೊದಲಿನಿಂದ ಲೈಫ್ ಶುರು ಮಾಡಿ ಎಂದು ನೆಟ್ಟಿಗರು ಕಮೆಂಟ್‌ನಲ್ಲಿ ಸಲಹೆ ನೀಡಿದ್ದಾರೆ.



