April 13, 2026
Monday, April 13, 2026
spot_img

ವಾಟರ್ ಪಾರ್ಕ್‌ನಲ್ಲಿ ಫುಲ್ ಎಂಜಾಯ್ ಮಾಡ್ಬೇಕಾ? ಹಾಗಿದ್ರೆ ನಿಮ್ಮ ಬ್ಯಾಗ್‌ನಲ್ಲಿ ಈ ಐಟಂಗಳು ಮಿಸ್ ಆಗದಿರಲಿ

ಬೇಸಿಗೆಯ ಧಗೆಯಿಂದ ಪಾರಾಗಲು ಫ್ಯಾಮಿಲಿ ಅಥವಾ ಫ್ರೆಂಡ್ಸ್ ಜೊತೆ ವಾಟರ್ ಪಾರ್ಕ್‌ಗೆ ಹೋಗುವುದು ಈಗಿನ ಟ್ರೆಂಡ್. ಆದರೆ, ಸರಿಯಾದ ತಯಾರಿ ಇಲ್ಲದೆ ಹೋದರೆ ಖುಷಿಗಿಂತ ಕಿರಿಕಿರಿ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ನಿಮ್ಮ ಪ್ರವಾಸ ಸುಗಮವಾಗಿರಲು ಈ ಕೆಳಗಿನ ಟಿಪ್ಸ್ ಫಾಲೋ ಮಾಡಿ:

ನೀರಿನಲ್ಲಿ ಆಟವಾಡುವಾಗ ಬಿಸಿಲಿಗೆ ಚರ್ಮ ಕಪ್ಪಾಗುವುದು ಅಥವಾ ಸುಡುವುದು ಸಾಮಾನ್ಯ. ಆದ್ದರಿಂದ ವಾಟರ್ ರೆಸಿಸ್ಟೆಂಟ್ ಸನ್‌ಸ್ಕ್ರೀನ್ ಲೋಷನ್ ಹಚ್ಚಿಕೊಳ್ಳುವುದು ಬಹಳ ಮುಖ್ಯ.

ವಾಟರ್ ಪಾರ್ಕ್‌ಗಳಲ್ಲಿ ಕಾಟನ್ ಬಟ್ಟೆಗಳಿಗೆ ಅವಕಾಶ ಇರುವುದಿಲ್ಲ. ಸ್ಲೈಡ್‌ಗಳಲ್ಲಿ ಸರಾಗವಾಗಿ ಚಲಿಸಲು ಮತ್ತು ಆರಾಮದಾಯಕವಾಗಿರಲು ನೈಲಾನ್ ಅಥವಾ ಸಿಂಥೆಟಿಕ್ ಈಜುಡುಗೆಯನ್ನೇ ಧರಿಸಿ.

ನೀರಿನಲ್ಲಿ ಇರುವುದರಿಂದ ನಮಗೆ ಬಾಯಾರಿಕೆ ಅರಿವಾಗುವುದಿಲ್ಲ. ಆದರೆ ಬಿಸಿಲಿನಲ್ಲಿ ಶರೀರವು ಬೇಗನೆ ನಿರ್ಜಲೀಕರಣಕ್ಕೆ ಒಳಗಾಗುತ್ತದೆ. ಹಾಗಾಗಿ ಆಗಾಗ ನೀರು ಅಥವಾ ಹಣ್ಣಿನ ರಸ ಸೇವಿಸಿ.

ವಾಟರ್ ಪಾರ್ಕ್ ನೀರು ಕ್ಲೋರಿನ್ ಯುಕ್ತವಾಗಿರುತ್ತದೆ. ಆಟದ ನಂತರ ಕಣ್ಣು ಅಥವಾ ಚರ್ಮದ ರಕ್ಷಣೆಗೆ ಗಮನ ನೀಡಿ. ಹಾಗೆಯೇ ಜಲನಿರೋಧಕ ಬ್ಯಾಗ್‌ನಲ್ಲಿ ಸಣ್ಣಪುಟ್ಟ ಔಷಧಗಳನ್ನು ಕೊಂಡೊಯ್ಯಿರಿ.

ನೀರಿನಿಂದ ಮೊಬೈಲ್ ಕೆಡದಂತೆ ವಾಟರ್‌ಪ್ರೂಫ್ ಪೌಚ್‌ಗಳನ್ನು ಬಳಸಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !