April 15, 2026
Wednesday, April 15, 2026
spot_img

Summer Drink | ಬೇಸಿಗೆಯ ಬಿಸಿಗೆ ಸೂಪರ್ ಈ ರಾಗಿ ಬನಾನಾ ಮಿಲ್ಕ್ ಶೇಕ್: ನೀವೂ ಒಮ್ಮೆ ಟ್ರೈ ಮಾಡಿ

ಬೇಸಿಗೆಯ ಬಿಸಿಲಲ್ಲಿ ದೇಹಕ್ಕೆ ತಂಪು, ಶಕ್ತಿ ಮತ್ತು ಹೊಟ್ಟೆ ತುಂಬುವ ಪಾನೀಯ ಈ ರಾಗಿ ಬನಾನಾ ಮಿಲ್ಕ್ ಶೇಕ್. ರಾಗಿ ಶಕ್ತಿ ನೀಡುತ್ತದೆ, ಬಾಳೆಹಣ್ಣು ಹೊಟ್ಟೆ ತುಂಬಿರೋ ಭಾವನೆ ಕೊಡುತ್ತದೆ, ಹಾಲು ದೇಹಕ್ಕೆ ಪೌಷ್ಟಿಕಾಂಶ ಒದಗಿಸುತ್ತದೆ. ಮಕ್ಕಳಿಂದ ದೊಡ್ಡವರವರೆಗೂ ಎಲ್ಲರೂ ಇಷ್ಟಪಡುವ ಈ ಪಾನೀಯವನ್ನು ಮನೆಯಲ್ಲೇ ಸುಲಭವಾಗಿ ಮಾಡಬಹುದು.

ಬೇಕಾಗುವ ಪದಾರ್ಥಗಳು:

ರಾಗಿ ಹಿಟ್ಟು – 2 ಚಮಚ
ಬಾಳೆಹಣ್ಣು – 1
ತಂಪಾದ ಹಾಲು – 1 ಕಪ್
ಖರ್ಜೂರ – 2 ರಿಂದ 3
ಜೇನುತುಪ್ಪ ಅಥವಾ ಬೆಲ್ಲ – 1 ಚಮಚ (ಐಚ್ಛಿಕ)
ಏಲಕ್ಕಿ ಪುಡಿ – ಒಂದು ಚಿಟಿಕೆ
ಐಸ್ ಕ್ಯೂಬ್ಸ್ – ಬೇಕಾದಷ್ಟು
ಬಾದಾಮಿ ಅಥವಾ ಪಿಸ್ತಾ ಪುಡಿ – ಅಲಂಕಾರಕ್ಕೆ

ಮಾಡುವ ವಿಧಾನ:

ಮೊದಲು ಒಂದು ಸಣ್ಣ ಪಾತ್ರೆಗೆ ರಾಗಿ ಹಿಟ್ಟು ಹಾಕಿ ಸ್ವಲ್ಪ ನೀರು ಅಥವಾ ಹಾಲು ಸೇರಿಸಿ ಗಂಟಿಲ್ಲದಂತೆ ಚೆನ್ನಾಗಿ ಕಲೆಸಿ. ನಂತರ ಸಣ್ಣ ಉರಿಯಲ್ಲಿ 4 ರಿಂದ 5 ನಿಮಿಷ ಬೇಯಿಸಿ. ಮಿಶ್ರಣ ಸ್ವಲ್ಪ ದಪ್ಪವಾದಾಗ ಗ್ಯಾಸ್ ಆಫ್ ಮಾಡಿ ತಣ್ಣಗಾಗಲು ಬಿಡಿ.

ಈಗ ಮಿಕ್ಸಿ ಜಾರ್‌ಗೆ ತಣ್ಣಗಾದ ರಾಗಿ ಮಿಶ್ರಣ, ಬಾಳೆಹಣ್ಣು, ಖರ್ಜೂರ, ತಂಪಾದ ಹಾಲು, ಏಲಕ್ಕಿ ಪುಡಿ ಮತ್ತು ಐಸ್ ಕ್ಯೂಬ್ಸ್ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಬೇಕಾದರೆ ಸ್ವಲ್ಪ ಜೇನುತುಪ್ಪ ಸೇರಿಸಿ ಇನ್ನಷ್ಟು ರುಚಿ ಹೆಚ್ಚಿಸಬಹುದು.

ಗ್ಲಾಸ್‌ಗೆ ಸುರಿದು ಮೇಲೆ ಬಾದಾಮಿ ಅಥವಾ ಪಿಸ್ತಾ ಪುಡಿ ಹಾಕಿ ತಣ್ಣಗೆ ಸರ್ವ್ ಮಾಡಿ. ಬೇಸಿಗೆಯಲ್ಲಿ ದೇಹಕ್ಕೆ ತಂಪು ಮತ್ತು ತಕ್ಷಣ ಶಕ್ತಿ ನೀಡುವ ಆರೋಗ್ಯಕರ ಡ್ರಿಂಕ್ ಇದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !