ನಮ್ಮ ಮಕ್ಕಳು ಬೇರೆ ಎಲ್ಲಾ ಮಕ್ಕಳಿಗಿಂತ ವಿಭಿನ್ನವಾಗಿರಬೇಕು. ವಿಭಿನ್ನವಾದ ಆಲೋಚನೆಗಳಿಂದ ತುಂಬಿರಬೇಕು ಅಂದ್ಕೋತೀರಾ? ಎಲ್ಲ ಪೋಷಕರು ಹೀಗೆ ಆಲೋಚಿಸ್ತಾರೆ. ಆದರೆ ಕೆಲವು ಮಾತ್ರ ಅದಕ್ಕೆ ಬೇಕಾದ ತಯಾರಿ ಮಾಡುತ್ತಾರೆ. ಮಕ್ಕಳ ಮೆದುಳಿಗೆ ಈ ಊಟ ತಿಂಡಿ ಇಷ್ಟವಾಗುತ್ತದೆ. ಇದನ್ನೇ ನೀಡಿ..
ಡಾರ್ಕ್ ಚಾಕೋಲೆಟ್‌ನಲ್ಲಿ ಫ್ಲೇವನಾಲ್‌ಗಳಿವೆ. ಇದು ರಕ್ತದ ಹರಿವನ್ನು ಹೆಚ್ಚು ಮಾಡುತ್ತವೆ. ಸಕಾರಾತ್ಮಕ ಮನಸ್ಥಿತಿ ಹುಟ್ಟಿಸುತ್ತದೆ.

ಸೂರ್ಯಕಾಂತಿ ಬೀಜಗಳಲ್ಲಿ ಮೆದುಳಿಗೆ ಅಗತ್ಯವಾದ ಪೋಷಕಾಂಶಗಳ ಸಂಪತ್ತು ಇದೆ. ಇದರಲ್ಲಿ ಕಂಡುಬರುವ ವಿಟಮಿನ್ ಇ ಅಂಶವು ವಯಸ್ಸಾದಾಗಲೂ ಸ್ಮರಣಶಕ್ತಿಯು ಹಾಗೆಯೇ ಉಳಿಯುವಂತೆ ಮಾಡುತ್ತದೆ.

ಟೊಮ್ಯಾಟೊದಲ್ಲಿರುವ ಲೈಕೋಪೀನ್ ಎಂಬ ಪೋಷಕಾಂಶ ಮೆದುಳನ್ನು ಚುರುಕು ಮಾಡುತ್ತದೆ. ನೀವು ಮಕ್ಕಳಿಗೆ ಟೊಮೆಟೊ ಸೂಪ್ ತಯಾರಿಸಬಹುದು ಇನ್ನಿತರ ರೂಪದಲ್ಲಿ ಟೊಮ್ಯಾಟೊವನ್ನು ಸೇರಿಸಬಹುದು.

ಬ್ರೊಕೊಲಿಯಲ್ಲಿ ಕಂಡುಬರುವ ‘ಸಲ್ಫೊರಾಫೇನ್’ ಸಂಯುಕ್ತವು ಮೆದುಳಿನಲ್ಲಿ ಉರಿಯೂತ ಕಡಿಮೆ ಮಾಡುತ್ತದೆ. ಸ್ಮರಣಶಕ್ತಿ ನಷ್ಟದಂತಹ ಅರಿವಿನ ಅಸ್ವಸ್ಥತೆಗಳನ್ನು ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ.




