April 14, 2026
Tuesday, April 14, 2026
spot_img

LSG ವಿರುದ್ಧ ಕೊಹ್ಲಿ ಆಟ ಅನುಮಾನ?: RCBಯಿಂದ ಬಂತು ‘ಫಿಟ್ನೆಸ್ ಅಪ್ಡೇಟ್’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂಬೈ ವಿರುದ್ಧದ ರೋಚಕ ಗೆಲುವಿನ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳ ಗಮನ ಇದೀಗ ಒಂದು ಪ್ರಶ್ನೆಯ ಮೇಲೆ ನೆಟ್ಟಿದೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಮಹತ್ವದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕಣಕ್ಕಿಳಿಯುತ್ತಾರಾ? ಇತ್ತೀಚಿನ ಮಾಹಿತಿ ಪ್ರಕಾರ, ಕಿಂಗ್ ಕೊಹ್ಲಿಯ ಆಟದ ಬಗ್ಗೆ ಇನ್ನೂ ಸ್ವಲ್ಪ ಅನುಮಾನ ಮುಂದುವರಿದಿದ್ದರೂ, ಆತಂಕಪಡುವಷ್ಟು ಗಂಭೀರ ಸ್ಥಿತಿ ಇಲ್ಲ ಎಂಬ ಸೂಚನೆಗಳು ಸಿಕ್ಕಿವೆ.

ವಾಂಖೆಡೆಯಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್ ವೇಳೆ ಕೊಹ್ಲಿಗೆ ಕಾಲಿನ ಹಿಮ್ಮಡಿ ಭಾಗದಲ್ಲಿ ಸಣ್ಣ ಮಟ್ಟಿನ ತೊಂದರೆ ಕಾಣಿಸಿಕೊಂಡಿತ್ತು. ಇದರ ಪರಿಣಾಮವಾಗಿ ಅವರು ಎರಡನೇ ಇನ್ನಿಂಗ್ಸ್‌ನಲ್ಲಿ ಫೀಲ್ಡಿಂಗ್‌ಗೆ ಬರದೆ ಡಗೌಟ್‌ನಲ್ಲೇ ಉಳಿದಿದ್ದರು. ಇದರಿಂದ ಅಭಿಮಾನಿಗಳಲ್ಲಿ ಆತಂಕ ಹೆಚ್ಚಾಗಿತ್ತು.

ಇದನ್ನೂ ಓದಿ:

ಆದರೆ ತಂಡದ ನಾಯಕ ರಜತ್ ಪಾಟಿದಾರ್ ಮತ್ತು ಕೃನಾಲ್ ಪಾಂಡ್ಯ ನೀಡಿರುವ ಅಪ್‌ಡೇಟ್ ಪ್ರಕಾರ, ಕೊಹ್ಲಿಯ ಗಾಯ ಗಂಭೀರವಾಗಿಲ್ಲ. ತಂಡದ ಫಿಸಿಯೋಗಳ ಮೇಲ್ವಿಚಾರಣೆಯಲ್ಲಿ ಅವರು ವಿಶ್ರಾಂತಿ ಪಡೆಯುತ್ತಿದ್ದು, ಏಪ್ರಿಲ್ 15ರಂದು ಲಕ್ನೋ ವಿರುದ್ಧ ನಡೆಯಲಿರುವ ಪಂದ್ಯಕ್ಕೂ ಮುನ್ನ ಅಂತಿಮ ಫಿಟ್ನೆಸ್ ಟೆಸ್ಟ್ ನಡೆಸಲಾಗುತ್ತದೆ.

ಒಂದು ವೇಳೆ ಕೊಹ್ಲಿ ಪಂದ್ಯಕ್ಕೆ ಅಲಭ್ಯರಾದರೆ, ಆರ್‌ಸಿಬಿ ಪ್ಲೇಯಿಂಗ್ ಇಲೆವೆನ್‌ನಲ್ಲಿ ಮಹತ್ವದ ಬದಲಾವಣೆ ಸಾಧ್ಯ. ದೇವದತ್ ಪಡಿಕ್ಕಲ್ ಅಥವಾ ವೆಂಕಟೇಶ್ ಅಯ್ಯರ್ ಅವರಿಗೆ ಮೇಲ್ದರ್ಜೆಯಲ್ಲಿ ಅವಕಾಶ ಸಿಗುವ ಸಾಧ್ಯತೆ ಇದೆ. ಆದರೆ ಇತ್ತೀಚಿನ ವರದಿಗಳ ಪ್ರಕಾರ ಕೊಹ್ಲಿ ಚೇತರಿಕೆಯಲ್ಲಿ ಇದ್ದು, ಪಂದ್ಯಕ್ಕೆ ಸಜ್ಜಾಗುವ ಸಾಧ್ಯತೆ ಹೆಚ್ಚು ಎಂದು ಹೇಳಲಾಗುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !