ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರ ರಾಜಕೀಯದಲ್ಲಿ ನಾಳೆಯಿಂದ ಹೊಸ ಯುಗ ಶುರುವಾಗಲಿದ್ದು, ಮೊದಲ ಬಾರಿಗೆ ಬಿಜೆಪಿ ಸರ್ಕಾರ ರಚನೆಯಾಗಲಿದ್ದು, ಸಾಮ್ರಾಟ್ ಚೌಧರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಈ ಸಂಬಂಧ ಶಾಸಕಾಂಗ ಪಕ್ಷದ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದ್ದು, ಈ ವೇಳೆ ಮಾತನಾಡಿದ ಸಾಮ್ರಾಟ್ ಚೌಧರಿ, ಬಿಹಾರ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ ಸೇವೆ ಸಲ್ಲಿಸುವ ಅವಕಾಶ ನೀಡಿದ್ದಕ್ಕೆ ಭಾರತೀಯ ಜನತಾ ಪಕ್ಷದ ಕೇಂದ್ರ ನಾಯಕತ್ವಕ್ಕೆ ನನ್ನ ಹೃತ್ಪೂರ್ವಕ ಕೃತಜ್ಞತೆ. ಇದು ಕೇವಲ ಒಂದು ಹುದ್ದೆಯಲ್ಲ, ಬಿಹಾರದ ಜನರಿಗೆ ಸೇವೆ ಸಲ್ಲಿಸಲು ಮತ್ತು ನಂಬಿಕೆ ಹಾಗೂ ಕನಸುಗಳನ್ನು ನನಸಾಗಿಸಲು ಸಿಕ್ಕ ಪವಿತ್ರ ಅವಕಾಶ ಎಂದು ಬಣ್ಣಿಸಿದರು.
ನಿಮ್ಮ ಪ್ರೀತಿ ಆಶೀರ್ವಾದದಿಂದ ನಾನು ಪ್ರತಿಯೊಬ್ಬ ನಾಗರಿಕನ ನಿರೀಕ್ಷೆಗಳನ್ನು ಮುಟ್ಟಲು ಪ್ರಾಮಾಣಿಕತೆಯಿಂದ ಕೆಲಸ ಮಾಡುವುದಾಗಿ ಎಂದು ಪ್ರತಿಜ್ಞೆ ಮಾಡುತ್ತೇನೆ. ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವ ಮತ್ತು ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರ ಮಾರ್ಗದರ್ಶ ಜೊತೆ ಜೊತೆಯಾಗಿ ಬಿಹಾರವನ್ನು ಅಭಿವೃದ್ಧಿ, ಉತ್ತಮ ಆಡಳಿತ ಮತ್ತು ಹೊಸ ದೃಷ್ಟಿಕೋನದತ್ತ ಕೊಂಡೊಯ್ಯಲು ನಿರಂತರವಾಗಿ ಬದ್ಧನಾಗಿರುತ್ತೇನೆಎಂದು ತಿಳಿಸಿದ್ದಾರೆ.



