April 15, 2026
Wednesday, April 15, 2026
spot_img

ದಿನಭವಿಷ್ಯ: ನಿಮ್ಮ ಸಾಧನೆ ನೋಡಿ ಹೊಟ್ಟೆಉರಿ ಪಡ್ತಾರೆ, ಟೀಕೆಗಳಿಗೆ ಬೇಜಾರ್ ಮಾಡ್ಕೋಬೇಡಿ

ಮೇಷ
ದೈಹಿಕವಾಗಿ, ಮಾನಸಿಕವಾಗಿ ಇಂದು ಬಳಲುವಷ್ಟು ಕೆಲಸ. ಆತ್ಮೀಯರ ಸಂಗ ನೆಮ್ಮದಿ ತರಲಿದೆ. ಧನವ್ಯಯ ಅಧಿಕ.ಉಳಿತಾಯ ಹೆಚ್ಚಿಸಿ.
ವೃಷಭ
ನಿಮ್ಮ ಸಾಧನೆ ಕೆಲವರಿಗೆ ಹೊಟ್ಟೆಯುರಿ ತರಲಿದೆ. ನೀವು ತಲೆ ಕೆಡಿಸಿಕೊಳ್ಳದಿರಿ. ಪ್ರೀತಿಯ ವಿಷಯದಲ್ಲಿ ಪ್ರಮುಖ ಬೆಳವಣಿಗೆ ಆದೀತು.
ಮಿಥುನ
ಇತ್ತೀಚಿನ ಕೆಲ ಕೆಲಸಗಳ ಪರಾಮರ್ಶೆ ನಡೆಸಿ. ತಪ್ಪಿದ್ದರೆ ತಿದ್ದಿಕೊಳ್ಳಿ. ಟೀಕೆಗಳಿಗೆ ನೋಯದಿರಿ. ಕೌಟುಂಬಿಕ ಬಿಕ್ಕಟ್ಟು ಜಾಣ್ಮೆಯಿಂದ ಪರಿಹರಿಸಿ.
ಕಟಕ
ಅಧಿಕ ಕೆಲಸದ ಒತ್ತಡ. ಸಂಗಾತಿ ಜತೆ ವಿರಸ. ಮನಸ್ಸು ಅಶಾಂತ. ಸ್ವಂತ ಉದ್ದಿಮೆಯಲ್ಲಿ ಹಿನ್ನಡೆ ಉಂಟಾದೀತು. ಈ ದಿನ ಆದಷ್ಟು ತಣ್ಣಗಿರಿ.
ಸಿಂಹ
ವೃತ್ತಿ ಕ್ಷೇತ್ರದಲ್ಲಿ ಎಲ್ಲರನ್ನು ಪೂರ್ಣವಾಗಿ ನಂಬದಿರಿ. ಹರಿತ ವಸ್ತು ಬಳಕೆಯಲ್ಲಿ ಎಚ್ಚರವಿರಲಿ. ಆಧ್ಯಾತ್ಮಿಕ ಚಿಂತನೆ ಆವರಿಸಬಹುದು.
ಕನ್ಯಾ
ಸಾಮಾಜಿಕ, ಖಾಸಗಿ ಬದ್ಧತೆ ಈಡೇರಿಸಬೇಕಾದ ಒತ್ತಡ. ಎಡೆಬಿಡದ ಕೆಲಸದಿಂದ ವಿರಾಮ ಸಿಗದು. ಕೌಟುಂಬಿಕ ಶಾಂತಿಗೆ ಭಂಗ ಬಂದೀತು.
ತುಲಾ
ನಿಮ್ಮ ಇಂದಿನ ನಿರ್ಧಾರ ದೀರ್ಘಾವಧಿ ಪರಿಣಾಮ ಬೀರಬಹುದು. ಯೋಚಿಸಿ ನಿರ್ಧರಿಸಿ. ಸಣ್ಣ ವಿಷಯವೊಂದು ಮನಸ್ಸಿಗೆ ಕಿರಿಕಿರಿ ಸೃಷ್ಟಿಸಲಿದೆ.
ವೃಶ್ಚಿಕ
ಗ್ರಹಗತಿ ನಿಮಗೆ ಪೂರಕ. ವೃತ್ತಿಯಲ್ಲಿ ಉನ್ನತಿ. ವೈಯಕ್ತಿಕ ಚಿಂತೆಗೆ ಪರಿಹಾರದ ಲಕ್ಷಣ ತೋರುತ್ತಿದೆ. ಮುನಿಸು ದೂರ, ಸಂಬಂಧ ಹತ್ತಿರ.
ಧನು
ಅಂತಃಪ್ರೇರಣೆ ಪ್ರಕಾರ ನಡಕೊಳ್ಳಿ. ಅದು ನಿಮ್ಮನ್ನು ಉನ್ನತಿಗೆ ಕೊಂಡೊಯ್ಯಲಿದೆ. ಸಣ್ಣ ವಿಷಯಕ್ಕೆ ಜಗಳ ಕಾಯಲು ಹೋಗಬೇಡಿ.
ಮಕರ
ಭಾವನಾತ್ಮಕ ಸವಾಲು ಎದುರಿಸುವಿರಿ. ಮನೋನಿಗ್ರಹ ಅವಶ್ಯ. ಬಹುಮುಖ್ಯ ಬಯಕೆ ಈಡೇರುವ ಕಾಲ ಬಂದಿದೆ. ಧನಪ್ರಾಪ್ತಿ.
ಕುಂಭ
ಹೊಸತಾದುದನ್ನು ಅಳವಡಿಸಲು ಸಕಾಲ. ಕೆಲ ವಿಚಾರಗಳಲ್ಲಿ ಬದಲಾವಣೆ ತಂದುಕೊಳ್ಳಿ. ಸಂಘರ್ಷದ ಮನೋಭಾವ ಬಿಡಿ. ಹೊಂದಾಣಿಕೆ ಒಳಿತು.
ಮೀನ
ಇಂದು ತಾಳ್ಮೆ ಮುಖ್ಯ. ಪ್ರತಿಕೂಲ ಸನ್ನಿವೇಶ ಎದುರಾದರೂ ಧೃತಿಗೆಡದಿರಿ. ಬಳಿಕ ಎಲ್ಲವೂ ತಾನಾಗಿ ಸರಿಹೋಗಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !