ಮಕ್ಕಳಿಗೆ ರಜೆ ಸಿಗೋದು ಬೇಸಿಗೆಯಲ್ಲಿ. ಇನ್ನು ಬೇಸಿಗೆ ಮೂರು ತಿಂಗಳ ಕಾಲ ಮನೆಯಲ್ಲೇ ಕೂರೋದು ಅಸಾಧ್ಯ ಅನ್ನೋರು ಟ್ರಿಪ್ ಹೋಗಿಯೇ ಹೋಗ್ತಾರೆ. ಅಜ್ಜಿ ಮನೆಗೆ, ನೆಂಟರ ಮನೆಗೆ ಅಲ್ಲಿಗೆ ಇಲ್ಲಿಗೆ ಹೀಗೆ ಎಲ್ಲೇ ಹೋಗಿ ಈ ಟ್ರಾವೆಲ್ ಟಿಪ್ಸ್ ನಿಮ್ಮ ಬಳಿ ಇರಲಿ..
ನೀವು ಯಾವ ಜಾಗಕ್ಕೆ ಹೋಗ್ತಿದ್ದೀರಾ? ಆ ಜಾಗದ ಬಗ್ಗೆ ರಿಸರ್ಚ್ ಮಾಡಿ. ಅಲ್ಲಿನ ವಾತಾವರಣ, ಅಲ್ಲಿನ ಹೊಟೇಲ್ಗಳು, ಊಟ ತಿಂಡಿಗಳ ಬಗ್ಗೆ ನೀಟಾಗಿ ರಿಸರ್ಚ್ ಮಾಡಿ. ನಂತರವೇ ಹೋಗುವ ಪ್ಲಾನ್ ಮಾಡಿ.
ಟ್ರಾವೆಲ್ನಲ್ಲಿ ಏನಾದ್ರೂ ತಿನ್ನಿ ಬಟ್ ನೀರು ಕುಡಿಯೋದನ್ನು ಮರೆಯಬೇಡಿ. ಹೆಚ್ಚೆಚ್ಚು ನೀರು ಕುಡಿದಷ್ಟು ಆರೋಗ್ಯವಾಗಿ ಇರ್ತೀರಿ. ಇಲ್ಲವಾದರೆ ಬಿಸಿಲಿನಲ್ಲಿ ಡೀಹೈಡ್ರೇಟ್ ಆಗಿ ಸಮಸ್ಯೆಗಳು ಬರುತ್ತವೆ.
ಹೊರಗಡೆ ಊಟ ತಿಂಡಿಯ ಬದಲು ಮನೆಯಲ್ಲಿಯೇ ಆರೋಗ್ಯಕರವಾದ ಸ್ನಾಕ್ಸ್ ಪ್ಯಾಕ್ ಮಾಡಿ. ಹಣ್ಣುಗಳು, ಸ್ವೀಟ್ ಕಾರ್ನ್, ಮಖಾನಾ ಇನ್ನಿತರ ಸ್ನ್ಯಾಕ್ಸ್ ಬೆಸ್ಟ್.
ಕಾರಿನಲ್ಲಿ ಕೂತಲ್ಲೇ ಕೂತಿರಬೇಡಿ. ನೆರಳಿನ ಜಾಗ ಸಿಕ್ಕಾಗೊಮ್ಮೆ ಕಾರನ್ನು ನಿಲ್ಲಿಸಿ ಬಾಡಿ ಸ್ಟ್ರೆಚಿಂಗ್ ಮಾಡಿ.
ಉಪ್ಪು ಹಾಗೂ ಸಕ್ಕರೆಯುಕ್ತ ಆಹಾರಗಳ ಸೇವನೆ ಕಡಿಮೆ ಮಾಡಿ. ಟ್ರಾವೆಲ್ ಎಂದರೆ ಜಂಕ್ ಫುಡ್ಗಳನ್ನು ತಿನ್ನೋದು ಕಾಮನ್. ಚಿಪ್ಸ್, ಚಾಕೋಲೆಟ್ಸ್ಗಳನ್ನು ಅವಾಯ್ಡ್ ಮಾಡಿ.
ಊಟಕ್ಕೆ ನಿಲ್ಲಿಸುವ ಜಾಗದ ಬಗ್ಗೆ ಗಮನ ಇರಲಿ. ಲೈಟ್ ಆದ ಊಟ ಮಾಡಿ ಟ್ರಾವೆಲ್ ಮಾಡಿ.
ಕಾರಿನಲ್ಲಿ ಅಥವಾ ಟ್ರೈನ್ನಲ್ಲಿ ಹೋಗೋದಾದ್ರೆ ನಿಮ್ಮ ರೊಟೀನ್ಗೆ ತಕ್ಕಂತೆಯೇ ರೆಸ್ಟ್ ಮಾಡಿ. ನಿದ್ದೆ ಮಾಡೋದು ಬೆಸ್ಟ್ ಕೆಲಸ.
ಗಾಡಿಯಲ್ಲೊಂದು ಸ್ಯಾನಿಟೈಸರ್ ಇರಲಿ. ಪಬ್ಲಿಕ್ ಟ್ರಾನ್ಸ್ಪೋರ್ಟ್ನಲ್ಲಿ ಹೋಗೋದಾದ್ರೆ ಮಿಸ್ ಮಾಡದೇ ಇದನ್ನು ಇಟ್ಟುಕೊಳ್ಳಿ.
ನಿಮ್ಮ ಚರ್ಮ ಹೈಡ್ರೇಟ್ ಆಗೋಕೆ ಆಗಾಗ ಮುಖ ತೊಳೆದು ಮಾಯಿಶ್ಚರೈಸ್ ಮಾಡಿ. ಫೇಸ್ ಪ್ಯಾಕ್ ಹಾಕಿ. ಸನ್ಸ್ಕ್ರೀನ್ ಮರೆಯಬೇಡಿ.
ಬೆಳಗ್ಗೆ ಎಷ್ಟು ಹೊತ್ತಿಗಾದ್ರೂ ಹೊರಡಿ ಆದರೆ ತಿಂಡಿ ತಿನ್ನದೇ ಟ್ರಾವೆಲ್ ಮಾಡಬೇಡಿ. ಗ್ಯಾಸ್ಟ್ರಿಕ್, ಆಸಿಡ್ ರಿಫ್ಲಕ್ಸ್ ಸಮಸ್ಯೆ ತಂದುಕೊಳ್ಳಬೇಡಿ.



