August 25, 2026
Tuesday, August 25, 2026
spot_img

ವಂದೇ ಮಾತರಂ ಹಾಡೋದಿಲ್ಲ ಎಂದ ಮುಸ್ಲಿಂ ಕಾರ್ಪೊರೇಟರ್‌ಗಳು: ಭುಗಿಲೆದ್ದ ವಿವಾದ

ಇಂದೋರ್‌ನ ಮುನ್ಸಿಪಲ್‌ ಕಾರ್ಪೋರೇಷನ್‌ನಲ್ಲಿ ನಡೆದ ಬಜೆಟ್‌ ಅಧಿವೇಶನದಲ್ಲಿ ಇಬ್ಬರು ಕಾರ್ಪೋರೇಟರ್‌ಗಳು ವಂದೇ ಮಾತರಂ ಹಾಡೋದಕ್ಕೆ ನಿರಾಕರಿಸಿದ್ದಾರೆ.

ಕಾರ್ಪೋರೇಟರ್‌ಗಳಾದ ರುಬಿನಾ ಇಕ್ಬಾಲ್‌ ಹಾಗೂ ಫೌಜಿಯಾ ಶೇಖ್‌ ಅಲೀಂ ವಂದೇ ಮಾತರಂ ಹಾಡೋದಿಲ್ಲ ಎಂದಿದ್ದಾರೆ. ಇದರಿಂದಾಗಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಮಾತಿನ ಜಟಪಟಿ ನಡೆದಿದೆ.

ಬಿಜೆಪಿ ಕಾರ್ಪೊರೇಟರ್ ಮತ್ತು ಐಎಂಸಿ ಮುಖ್ಯ ಸಚೇತಕ ಕಮಲ್ ಬಘೇಲಾ ಅವರು ಎಂಜಿ ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ರುಬಿನಾ ಇಕ್ಬಾಲ್ ಖಾನ್ ಮತ್ತು ಫೌಜಿಯಾ ಶೇಖ್ ಅಲೀಮ್ ವಿರುದ್ಧ ಭಾರತೀಯ ನ್ಯಾಯ ಸಂಹಿತದ ಸೆಕ್ಷನ್ 196(1) ಮತ್ತು 3(5) ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ರುಬಿನಾ ಇಕ್ಬಾಲ್ ಖಾನ್ ಮತ್ತು ಫೌಜಿಯಾ ಶೇಖ್ ಅಲೀಮ್ ವಿರುದ್ಧ ಸಮನ್ಸ್ ಜಾರಿಗೊಳಿಸಲಾಗಿದ್ದು, ಬಳಿಕ ಸುಮಾರು ನಾಲ್ಕೂವರೆ ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ. ಇಬ್ಬರು ತಪ್ಪಿತಸ್ಥರೆಂದು ಸಾಬೀತಾದರೆ ಮೂರರಿಂದ-ಐದು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !