October 17, 2026
Saturday, October 17, 2026
spot_img

ನವಿಲುಗರಿ ವಿವಾದಕ್ಕೆ ಫುಲ್ ಸ್ಟಾಪ್: ಕ್ಷಮೆ ಕೇಳಿದ ನಿವೇದಿತಾ ಗೌಡ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನವಿಲು ಗರಿಗಳ ಬಳಕೆಯಿಂದ ವಿವಾದಕ್ಕೀಡಾದ ‘ಹೇ ನವಿಲೇ’ ರೀಲ್ಸ್ ಪ್ರಕರಣದ ಬಳಿಕ ಬಿಗ್‌ಬಾಸ್ ಖ್ಯಾತಿಯ ನಿವೇದಿತಾ ಗೌಡ ಮತ್ತು ಡ್ಯಾನ್ಸರ್ ಕಿಶನ್ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘನೆ ಆರೋಪ ಕೇಳಿಬಂದ ಬೆನ್ನಲ್ಲೇ ಇಬ್ಬರೂ ಸಂಬಂಧಿತ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕಿದ್ದಾರೆ

ತಪ್ಪು ತಿಳುವಳಿಕೆಯಿಂದ ನಡೆದ ಘಟನೆ

ವಿಡಿಯೋ ಸಂದೇಶದ ಮೂಲಕ ಪ್ರತಿಕ್ರಿಯಿಸಿರುವ ನಿವೇದಿತಾ ಗೌಡ, ವನ್ಯಜೀವಿಗಳಿಗೆ ಸಂಬಂಧಿಸಿದ ವಸ್ತುಗಳನ್ನು ಬಳಸುವುದು ಕಾನೂನುಬಾಹಿರ ಎಂಬ ಮಾಹಿತಿ ತಮ್ಮ ಬಳಿ ಇರಲಿಲ್ಲ ಎಂದು ಹೇಳಿದ್ದಾರೆ. ಈ ರೀತಿಯ ವಸ್ತುಗಳನ್ನು ಬಳಸಿ ಯಾರೂ ವಿಡಿಯೋ ಮಾಡಬಾರದು ಎಂದು ಮನವಿ ಮಾಡಿದ್ದು, ಇಲಾಖೆಯ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ:

ಏನಿದು ವಿವಾದ?

ಇತ್ತೀಚೆಗೆ ಇಬ್ಬರೂ ನವಿಲು ಗರಿಗಳ ಅಲಂಕಾರ ಹೊಂದಿದ ಉಡುಪಿನಲ್ಲಿ ‘ಹೇ ನವಿಲೇ’ ಹಾಡಿಗೆ ರೀಲ್ಸ್ ಮಾಡಿದ್ದರು. ಇದರ ವಿರುದ್ಧ ಆಕ್ಷೇಪ ವ್ಯಕ್ತವಾಗಿದ್ದು, ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ತನಿಖೆ ಆರಂಭವಾಗಿದೆ.

Must Read