October 15, 2026
Thursday, October 15, 2026
spot_img

WEATHER | ಇನ್ನೂ 3 ದಿನ ಉಷ್ಣ ಅಲೆಯಂತೆ! ಬಿಸಿಲ ಝಳದಿಂದ ಹೈರಾಣಾದ ಕರ್ನಾಟಕ ಜನತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದಲ್ಲಿ ಬಿಸಿಲ ಝಳ ಹೆಚ್ಚಾಗುತ್ತಲೇ ಇದೆ. ತಾಪಮಾನ ಅಧಿಕವಾಗಿದ್ದು, ಮನೆಯಲ್ಲಿರುವ ಜನರಿಗೂ ಬಿಸಿಲು ಅತೀ ಎನಿಸುತ್ತಿದೆ.

ಹವಾಮಾನ ಇಲಾಖೆಯ ಮುನ್ಸೂಚನೆಯಂತೆ, ಮುಂದಿನ 48 ರಿಂದ 72 ಗಂಟೆಗಳ ಕಾಲ ಉತ್ತರ ಒಳನಾಡಿನ ಜಿಲ್ಲೆಗಳಾದ ಬಾಗಲಕೋಟೆ, ವಿಜಯಪುರ, ಕಲಬುರಗಿ ಮತ್ತು ರಾಯಚೂರಿನಲ್ಲಿ ಹೀಟ್ ವೇವ್ ಮುಂದುವರಿಯಲಿದೆ.

ಬೆಂಗಳೂರಿನಲ್ಲಿ ತಾಪಮಾನ 36-38 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿರಲಿದ್ದು, ಸಂಜೆಯ ವೇಳೆಗೆ ಕೆಲವು ಜಿಲ್ಲೆಗಳಲ್ಲಿ ಅಲ್ಪ ಪ್ರಮಾಣದ ಮೋಡ ಕವಿದ ವಾತಾವರಣವಿರಲಿದೆ. ಆದರೆ, ಕರಾವಳಿ ಭಾಗದಲ್ಲಿ ಉಷ್ಣಾಂಶದ ಜೊತೆಗೆ ತೇವಾಂಶ ಹೆಚ್ಚಾಗಿರುವುದರಿಂದ ಸೆಖೆ ಅತಿ ಹೆಚ್ಚಾಗಿ ಕಾಡಲಿದೆ.

ನಾರ್ಥ್‌ ಕರ್ನಾಟಕ ಭಾಗದಲ್ಲಿ ಅಕ್ಷರಶಃ ಬಿಸಿಲು ನೆತ್ತಿಯನ್ನು ಸುಡುತ್ತಿದೆ. ಹಿಂದೆಂದೂ ಕಾಣದಂತ ಬಿಸಿಲು ಜನರನ್ನು ಚಿಂತೆಗೀಡುಮಾಡಿದೆ.

Must Read