ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಇಂದು ಮಹಿಳಾ ಮೀಸಲಾತಿ ಮಸೂದೆ ಕುರಿತು ಮತ ಚಲಾವಣೆಯಾಗಲಿದ್ದು, ಈ ಹಿನ್ನೆಲೆ ಪ್ರಧಾನಿ ಮೋದಿ ಎಲ್ಲಾ ಸಂಸದರಿಗೆ ಮಹಿಳಾ ಮೀಸಲಾತಿ ಮಸೂದೆಯ ಪರವಾಗಿಮತ ಚಲಾಯಿಸುವಂತೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿನ ಪೋಸ್ಟ್ ಮಾಡಿರುವ ಮೋದಿ, ಮಸೂದೆಯ ಕುರಿತು ಸಂಸತ್ ವಿವರವಾದ ಚರ್ಚೆಗಳನ್ನು ನಡೆಸುತ್ತಿದೆ. ಸರ್ಕಾರವು ಎಲ್ಲಾ ಆತಂಕಗಳು ಮತ್ತು ತಪ್ಪು ಕಲ್ಪನೆಗಳನ್ನು ಪರಿಹರಿಸಿದೆ. ಚರ್ಚೆಯ ಸಮಯದಲ್ಲಿ ಮೂಡಿದ ಕಳವಳಗಳನ್ನು ಸರಕಾರ ಸಮರ್ಪಕವಾಗಿ ಸ್ಪಷ್ಟಪಡಿಸಿದೆ . ಎಲ್ಲಾ ಆತಂಕಗಳನ್ನು ದೂರ ಮಾಡಲಾಗಿದೆ. ದಯವಿಟ್ಟು ಸರಿಯಾದ ಯೋಚನೆ ಮಾಡಿ ಮಹಿಳಾ ಮೀಸಲಾತಿಯ ಪರವಾಗಿ ನಿರ್ಧಾರ ತೆಗೆದುಕೊಂಡು ಮತ ಚಲಾಯಿಸಿ ಎಂದು ಎಲ್ಲಾ ರಾಜಕೀಯ ಪಕ್ಷಗಳನ್ನು ಒತ್ತಾಯಿಸುತ್ತೇನೆ ಮತ್ತು ಮನವಿ ಮಾಡುತ್ತೇನೆ. ಈ ಮಸೂದೆ ದೇಶದ ನಾರಿ ಶಕ್ತಿಯ ಪರವಾಗಿ, ಎಲ್ಲಾ ಸದಸ್ಯರನ್ನು ನಾನು ಮನವಿ ಮಾಡುತ್ತೇನೆ. ದಯವಿಟ್ಟು ನಾರಿ ಶಕ್ತಿಯ ಭಾವನೆಗಳಿಗೆ ನೋವುಂಟುಮಾಡುವ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಮೋದಿ ಹೇಳಿದ್ದಾರೆ.



