April 19, 2026
Sunday, April 19, 2026
spot_img

ಮಹಿಳಾ ಮೀಸಲಾತಿ ಅಂದರೆ ವಿಪಕ್ಷಗಳಿಗೆ ವಿರೋಧ: ಲೋಕಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ವಾಗ್ದಾಳಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಸಂಸತ್ ನಲ್ಲಿ ಪ್ರತಿಪಕ್ಷಗಳು ಮಹಿಳಾ ಮೀಸಲಾತಿ ಮಸೂದೆ ತಿದ್ದುಪಡಿಗಳಿಗೆ ವಿರೋಧಿಸಿಲ್ಲ, ಬದಲಾಗಿ ಮಹಿಳಾ ಮೀಸಲಾತಿ ಅನ್ನೇ ವಿರೋಧಿಸುತ್ತಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ತಿಳಿಸಿದರು.

ಲೋಕಸಭೆಯಲ್ಲಿ ಇಂದು ಮಹಿಳಾ ಮೀಸಲಾತಿ ಮಸೂದೆ, ಕ್ಷೇತ್ರ ಮರುವಿಂಗಡಣೆ ಬಗ್ಗೆ ಚರ್ಚೆ ಸಂಬಂಧ ಮಾತನಾಡಿದ ಅವರು, ಕ್ಷೇತ್ರ ಮರುವಿಂಗಡಣೆಯನ್ನು ವಿರೋಧಿಸಿದರೆ ಎಸ್‌ಸಿ/ಎಸ್‌ಟಿ ಸ್ಥಾನಗಳ ಹೆಚ್ಚಳಕ್ಕೂ ವಿರೋಧಿಸಿದಂತೆಯೇ ಎಂದು ಟೀಕಿಸಿದರು. ಇಲ್ಲಿ ಮಸೂದೆಗಳ ಉದ್ದೇಶ ಮಹಿಳಾ ಸಬಲೀಕರಣ. ಒಂದೇ ಕ್ಷೇತ್ರದಲ್ಲಿ ಸುಮಾರು 49 ಲಕ್ಷ ಮತದಾರರು ಇದ್ದಾಗ ಒಬ್ಬ ಸಂಸದ ಹೇಗೆ ಅವರ ಅಗತ್ಯಗಳನ್ನು ಪೂರೈಸಬಹುದು ಪ್ರಶ್ನಿಸಿದರು. ಇಲ್ಲಿ ಪ್ರತಿಪಕ್ಷಗಳು ಮಸೂದೆಯ ಮೂಲ ವಿಚಾರ ಅರಿಯದೆ ಅದರ ವಿಷಯವನ್ನು ವಿರೋಧಿಸುತ್ತಿವೆ ಎಂದು ವಾಗ್ದಾಳಿ ನಡೆಸಿದರು.

ಇದೇ ವೇಳೆ ಕ್ಷೇತ್ರ ಮರುವಿಂಗಡಣೆಯಿಂದ ದಕ್ಷಿಣ ರಾಜ್ಯಗಳಿಗೆ ಅನ್ಯಾಯವಾಗಲಿದೆ ಎಂದು ಆರೋಪಕ್ಕೆ ಉತ್ತರ ನೀಡಿದ ಶಾ, ಇಲ್ಲಿ ಉತ್ತರದವರಿಗೆ ಇರುವಷ್ಟೇ ಅಧಿಕಾರ ದಕ್ಷಿಣದವರಿಗೂ ಇದೆ. ಇಲ್ಲಿ ಕೇವಲ ವಿಪಕ್ಷದವರು ಮಾತ್ರ ಉತ್ತರ-ದಕ್ಷಿಣ ವಿಭಜನೆ ಮಾಡುತ್ತಿರುವುದು. ಈ ಮಸೂದೆ ಯಾವುದೇ ರಾಜ್ಯಕ್ಕೂ, ಅದರಲ್ಲೂ ದಕ್ಷಿಣ ಭಾರತದ ರಾಜ್ಯಗಳಿಗೆ ನಷ್ಟವಾಗುವುದಿಲ್ಲ. ಪ್ರತಿಯೊಂದು ರಾಜ್ಯಕ್ಕೂ ಸಂಸತ್ತಿನಲ್ಲಿ ಸಮಾನತೆ ಸಿಗಲಿದೆ . ಆದರೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೂ, ವಿರೋಧ ಪಕ್ಷದಲ್ಲಿದ್ದಾಗಲೂ ಕ್ಷೇತ್ರ ಮರುವಿಂಗಡಣೆಗೆ ವಿರೋಧಿಸಿದೆ ಎಂದು ಅಮಿತ್​​ ಶಾ ಆರೋಪಿಸಿದ್ದಾರೆ.

ನಾವು ಮಾಡಿದ ಪ್ರತಿಯೊಂದು ಯೋಜನೆಗಳಿಗೂ ಕಾಂಗ್ರೆಸ್ ಮತ್ತು ಪ್ರತಿಪಕ್ಷ ವಿರೋಧ ವ್ಯಕ್ತಪಡಿಸಿದೆ.ಆರ್ಟಿಕಲ್ 370 ರದ್ದುಗೊಳಿಸಿದಾಗ ಅವರು ವಿರೋಧಿಸಿದರು. ಏರ್‌ಸ್ಟ್ರೈಕ್‌ಗಳು ಮತ್ತು ಆಪರೇಷನ್​​ ಸಿಂದೂರ್ ನಡೆಸಿದಾಗಲೂ ವಿರೋಧಿಸಿದರು. ರಾಮ ಮಂದಿರ ನಿರ್ಮಿಸಿದಾಗಲೂ ವಿರೋಧಿಸಿದರು ಎಂದು ವಾಗ್ದಾಳಿ ನಡೆಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !