June 26, 2026
Friday, June 26, 2026
spot_img

ಜಾತ್ರೆಗೆಂದು ತೆರಳಿದ್ದ ಬಾಲಕಿ ನಾಪತ್ತೆ: ಪೊಲೀಸರಿಂದ ಲುಕ್‌ಔಟ್ ನೊಟೀಸ್ ಜಾರಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಪಜೀರು ಗ್ರಾಮದ‌ ಅಡ್ಕ‌ ಎಂಬಲ್ಲಿಯ ತನ್ನ ಮನೆಯಿಂದ ಗೆಳೆಯರೊಂದಿಗೆ ಜಾತ್ರೆಗೆಂದು ತೆರಳಿದ್ದ ಅಪ್ರಾಪ್ತ ಬಾಲಕಿಯೊರ್ವಳು ನಾಪತ್ತೆಯಾಗಿದ್ದು,‌ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ದೂರು ದಾಖಲಾಗಿದ್ದು, ಬಾಲಕಿಯನ್ನು ಪತ್ತೆಹಚ್ಚಲು ಪೊಲೀಸರು ಲುಕ್‌ಔಟ್ ನೊಟೀಸ್ ಹೊರಡಿಸಿದ್ದಾರೆ.

ಪಜೀರು ಅಡ್ಕದ ಜಗದೀಶ್ ಎಂಬವರ ಪುತ್ರಿ ಚೈತನ್ಯ (16)ಎಂಬಾಕೆಯೇ ನಾಪತ್ತೆಯಾದ ಬಾಲಕಿ.

ಚೈತನ್ಯ ಹರೇಕಳ ರಾಮಕೃಷ್ಣ ಹೈಸ್ಕೂಲ್ ನಲ್ಲಿ 10 ನೇ ತರಗತಿಯಲ್ಲಿ ಓದುತ್ತಿದ್ದು, ಪರೀಕ್ಷೆ ಮುಗಿಸಿ ಮನೆಯಲ್ಲಿ ಇದ್ದಳು. ಎ.12 ರಂದು ಬೆಳಿಗ್ಗೆ ಮನೆಯಲ್ಲಿ ಗೆಳೆಯರೊಂದಿಗೆ ಪೊಳಲಿ ಜಾತ್ರೆಗೆಂದು ತೆರಳಿದ್ದು, ಬಳಿಕ ರಾತ್ರಿಯವರೆಗೂ ಮನೆಗೆ ವಾಪಸ್ಸಗದೇ ಇದ್ದುದರಿಂದ ಮನೆಯವರು ಆತಂಕಗೊಂಡು ಗೆಳೆಯರು ಹಾಗೂ ಸಂಬಂಧಿಕರ ಮನೆಯಲ್ಲಿ ಹುಡುಕಾಡಿದರೂ ಬಾಲಕಿ ಪತ್ತೆಯಾಗಿರಲಿಲ್ಲ.

ಬಳಿಕ ಮನೆಯವರು ಕೊಣಾಜೆ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !