October 9, 2026
Friday, October 9, 2026
spot_img

ದರ್ಶನ್‌ ಪುತ್ರನ ಕಾರು ಅಪಘಾತ: ಮಗ ಕಾರು ಓಡಿಸ್ತಾನೇ ಇರಲಿಲ್ಲ ಎಂದ ವಿಜಯಲಕ್ಷ್ಮಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟ ದರ್ಶನ್‌ ಪುತ್ರ ವಿನೀಶ್‌ ಪ್ರಯಾಣಿಸುತ್ತಿದ್ದ ಕಾರ್‌ ಬೈಕ್‌ಗೆ ಗುದ್ದಿದೆ ಎನ್ನುವ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಕಾರನ್ನು ದರ್ಶನ್‌ ಪುತ್ರ ವಿನೀತ್‌ ಓಡಿಸುತ್ತಿದ್ದರು ಎಂದೂ ಹೇಳಲಾಗಿದ್ದು, ತಾಯಿ ವಿಜಯಲಕ್ಷ್ಮೀ ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ.

ನಮ್ಮ ಕಾರು ಹಾಗೂ ದ್ವಿಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿರುವುದು ನಿಜ. ಆದರೆ ವಿನೀಶ್‌ ಕಾರು ಚಲಾಯಿಸಿಲ್ಲ. ಅವರಿಗೆ ಯಾವ ಗಾಯವೂ ಆಗಿಲ್ಲ. ಕುಟುಂಬದ ಡ್ರೈವರ್‌ ಕಾರು ಓಡಿಸ್ತಾ ಇದ್ದರು. ಟ್ರಾಫಿಕ್‌ನಲ್ಲಿ ಈ ರೀತಿ ಸಣ್ಣ ಅಪಘಾತ ಸಂಭವಿಸಿದೆ. ವೈಕ್‌ ಚಾಲಕ ನನ್ನದೇ ತಪ್ಪು ಎಂದು ಕ್ಷಮೆ ಕೇಳಿದ್ದಾನೆ. ಬೈಕ್‌ನವರಿಗೆ ಏನಾದ್ರೂ ಗಾಯ ಆಗಿದ್ಯಾ ನೋಡೋದಕ್ಕೆ ವಿನೀಶ್‌ ಕೆಳಗೆ ಇಳಿದಿದ್ದರು.

ಈ ಕ್ಲಿಪ್‌ಗಳನ್ನು ಮಾತ್ರ ಜನ ಬಳಸಿಕೊಂಡು ವಿನೀಶ್‌ ಜಗಳ ಆಡಿದ್ದಾನೆ, ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ ಎನ್ನುವ ಸುದ್ದಿ ಮಾಡಿದ್ದಾರೆ. ಇದು ಸುಳ್ಳು ಮಗ ಆರಾಮಾಗಿದ್ದಾನೆ ಎಂದು ಹೇಳಿದ್ದಾರೆ.

Must Read