April 19, 2026
Sunday, April 19, 2026
spot_img

ಲೋಕಸಭೆಯಲ್ಲಿ ಮಹಿಳಾ ಮಸೂದೆಗೆ ಹಿನ್ನಡೆ: ಸಂವಿಧಾನದ ಮೇಲಿನ ದಾಳಿ ತಡೆದಿದ್ದೇವೆ ಎಂದ ರಾಹುಲ್ ಗಾಂಧಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಲೋಕಸಭೆಯಲ್ಲಿ ಇಂದು ಮಹಿಳಾ ಮೀಸಲಾತಿ ಸಹಿತ ಮೂರು ಪ್ರಮುಖ ಮಸೂದೆಗಳಿಗೆ ಒಮ್ಮತ ಮತದಾನ ಸಿಗದೆ ಹಿನ್ನೆಲೆ ರದ್ದಾಗಿದ್ದು, ಈ ಸಂಬಂಧ ಪ್ರತಿಕ್ರಿಯಿಸಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸಂವಿಧಾನದ ಮೇಲಿನ ದಾಳಿಯನ್ನು ನಾವು ಯಶಸ್ವಿಯಾಗಿ ತಡೆದಿದ್ದೇವೆ ಎಂದು ಹೇಳಿದರು.

ಈ ಕುರುತ್ ಮಾಧ್ಯಮಗಳ ಮುಂದೆ ಮಾತನಾಡಿದ ಅವರು, ನಿಜವಾಗಿಯೂ ಪ್ರಧಾನಿ ಅವರಿಗೆ ಮಹಿಳಾ ಮೀಸಲಾತಿ ನೀಡುವ ಆಸಕ್ತಿ ಇದ್ದರೆ, 2023ರ ಹಳೆಯ ಮಸೂದೆಯನ್ನು ಮಂಡಿಸಿ ಜಾರಿಗೆ ತರಲಿ. ನಾವು ಅದಕ್ಕೆ ಬೆಂಬಲ ನೀಡುತ್ತೇವೆ ಎಂದು ಹೇಳಿದರು.

ಈ ಮಸೂದೆ ಕೇವಲ ಮಹಿಳಾ ಮೀಸಲಾತಿ ಮಸೂದೆಯಾಗಿರಲಿಲ್ಲ, ಬದಲಾಗಿ ರಾಜಕೀಯ ಮತ್ತು ಚುನಾವಣಾ ರಚನೆಯನ್ನು ಬದಲಿಸುವ ಯತ್ನವಾಗಿತ್ತು ಎಂದು ಆರೋಪಿಸಿದರು.

ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಮಾತನಾಡಿ, ಇದು ದೇಶದ ಪ್ರಜಾಪ್ರಭುತ್ವಕ್ಕೆ ಸಿಕ್ಕ ದೊಡ್ಡ ಜಯವಾಗಿದ್ದು, ಸದಾ ಮಹಿಳಾ ಹಕ್ಕುಗಳ ಬಗ್ಗೆ ಮಾತನಾಡುವ ಸರ್ಕಾರವು ಹಾಥರಸ್, ಉನ್ನಾವೋ ಮತ್ತು ಮಣಿಪುರ ಘಟನೆಗಳಲ್ಲಿ ಯಾವುದೇ ಕ್ರಮ ಕೈಗೊಳ್ಳದೆ ಮಹಿಳಾ ವಿರೋಧಿ ಮನಸ್ಥಿತಿಯ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !