April 19, 2026
Sunday, April 19, 2026
spot_img

ಪಲ್ಯ, ಗ್ರೇವಿ & More 64 | ಕರ್ನಾಟಕದ ಸ್ಪೆಷಲ್ ‘OG’ ತಿಳಿಸಾರು ಮಾಡೋದು ಹೇಗೆ ಗೊತ್ತಾ?

ಮನೆಯ ಊಟದಲ್ಲಿ ಅನ್ನದ ಜೊತೆ ಒಂದು ಬಿಸಿ ಬಿಸಿ ಸಾರು ಇದ್ದರೆ ಸಾಕು, ಊಟದ ರುಚಿ ಮತ್ತಷ್ಟು ಹೆಚ್ಚಾಗುತ್ತದೆ. ಅದರಲ್ಲಿ ಕರ್ನಾಟಕದ ಮನೆಯ ಸುವಾಸನೆ ತುಂಬಿರುವ OG ತಿಳಿಸಾರು ಎಂದರೆ ವಿಶೇಷ ಮಾತೇ ಬೇಡ. ಬಿಸಿ ಅನ್ನ, ತುಪ್ಪ ಹಾಗೂ ಪಲ್ಯದ ಜೊತೆ ಇದನ್ನು ಸವಿದರೆ ಊಟ ಸಂಪೂರ್ಣವಾಗುತ್ತದೆ.

ಬೇಕಾಗುವ ಪದಾರ್ಥಗಳು

ತೊಗರಿ ಬೇಳೆ – 1 ಕಪ್
ಹುಣಸೆಹಣ್ಣು – ಸಣ್ಣ ನಿಂಬೆ ಗಾತ್ರ
ಟೊಮೆಟೊ – 1
ಸಾರು ಪುಡಿ – 1 ರಿಂದ 1½ ಚಮಚ
ಅರಿಶಿನ – ಚಿಟಿಕೆ
ಬೆಲ್ಲ – ಸಣ್ಣ ತುಂಡು
ಉಪ್ಪು – ರುಚಿಗೆ ತಕ್ಕಷ್ಟು
ತುಪ್ಪ – 1 ಚಮಚ
ಸಾಸಿವೆ – ½ ಚಮಚ
ಜೀರಿಗೆ – ½ ಚಮಚ
ಒಣ ಮೆಣಸಿನಕಾಯಿ – 2
ಕರಿಬೇವು – ಕೆಲವು ಎಲೆಗಳು
ಹಿಂಗು – ಚಿಟಿಕೆ
ಕೊತ್ತಂಬರಿ ಸೊಪ್ಪು – ಸ್ವಲ್ಪ

ಮಾಡುವ ವಿಧಾನ

ಮೊದಲು ತೊಗರಿ ಬೇಳೆಯನ್ನು ಚೆನ್ನಾಗಿ ತೊಳೆದು ಕುಕ್ಕರ್‌ನಲ್ಲಿ ಅರಿಶಿನದೊಂದಿಗೆ ಮೃದುವಾಗಿ ಬೇಯಿಸಿಕೊಳ್ಳಿ. ಇನ್ನೊಂದು ಕಡೆ ಹುಣಸೆಹಣ್ಣನ್ನು ಸ್ವಲ್ಪ ನೀರಿನಲ್ಲಿ ನೆನೆಸಿ ಅದರ ರಸವನ್ನು ತೆಗೆದುಕೊಳ್ಳಿ.

ಒಂದು ಪಾತ್ರೆಯಲ್ಲಿ ಹುಣಸೆ ರಸ, ಸಣ್ಣದಾಗಿ ಹೆಚ್ಚಿದ ಟೊಮೆಟೊ, ಉಪ್ಪು, ಬೆಲ್ಲ ಮತ್ತು ಸಾರು ಪುಡಿ ಸೇರಿಸಿ ಚೆನ್ನಾಗಿ ಕುದಿಸಿ. ಟೊಮೆಟೊ ಮೃದುವಾದ ನಂತರ ಬೇಯಿಸಿದ ಬೇಳೆಯನ್ನು ಸ್ವಲ್ಪ ಮ್ಯಾಶ್ ಮಾಡಿ ಇದಕ್ಕೆ ಸೇರಿಸಿ. ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ ಸಣ್ಣ ಉರಿಯಲ್ಲಿ ಕೆಲವು ನಿಮಿಷ ಕುದಿಯಲು ಬಿಡಿ.

ಈಗ ಚಿಕ್ಕ ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಸಾಸಿವೆ, ಜೀರಿಗೆ, ಒಣ ಮೆಣಸಿನಕಾಯಿ, ಕರಿಬೇವು ಮತ್ತು ಹಿಂಗು ಹಾಕಿ ಒಗ್ಗರಣೆ ಮಾಡಿ ಸಾರಿಗೆ ಹಾಕಿ. ಕೊನೆಗೆ ಕೊತ್ತಂಬರಿ ಸೊಪ್ಪು ಉದುರಿಸಿ ಬಿಸಿ ಬಿಸಿ ಅನ್ನ ಮತ್ತು ತುಪ್ಪದ ಜೊತೆ ಸರ್ವ್ ಮಾಡಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !