April 18, 2026
Saturday, April 18, 2026
spot_img

ಬೆಂಗಳೂರಿನಲ್ಲಿ ರಾಹುಲ್,ಸ್ಟಬ್ಸ್ ಬೊಂಬಾಟ್ ಬ್ಯಾಟಿಂಗ್: ಆರ್​ಸಿಬಿ ವಿರುದ್ಧ ಗೆದ್ದು ಬೀಗಿದ ಡೆಲ್ಲಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕನ್ನಡಿಗ ರಾಹುಲ್​ ಹಾಗು ಟ್ರಿಸ್ಟಾನ್ ಸ್ಟಬ್ಸ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 6 ವಿಕೆಟ್​ಗಳ ರೋಚಕ ಜಯ ಸಾಧಿಸಿದೆ.

ಬೆಂಗಳೂರಿನಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಆರ್​ಸಿಬಿ ತಂಡ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 175 ರನ್​ಗಳ ಸಾಧಾರಣ ಮೊತ್ತ ದಾಖಲಿಸಿತ್ತು.

176 ರನ್​ಗಳ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ಗೆ ಆರಂಭದಲ್ಲೇ ಭುವನೇಶ್ವರ್ ಕುಮಾರ್ ಶಾಕ್ ನೀಡಿದ್ದು, ಪ್ರಮುಖ ಮೂವರು ಬ್ಯಾಟ್ಸ್ ಮ್ಯಾನ್ ಗಳು ಪೆವಿಲಿಯನ್ ಸೇರಿದರು.

ಬಳಿಕ ರಾಹುಲ್​ ಜೊತೆ ಸೇರಿದ ಟ್ರಿಸ್ಟಾನ್ ಸ್ಟಬ್ಸ್ ಭರ್ಜರಿ ಬ್ಯಾಟಿಂಗ್ ನಿಂದಾಗಿ ತಂಡದ ರನ್ ಮೊತ್ತ ಹೆಚ್ಚಾಯಿತು. ರಾಹುಲ್ 34 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್​ಗಳ ಸಹಿತ 57 ರನ್​ಗಳಿಸಿ ಔಟ್ ಆದರು. ಬಳಿಕ ಅಕ್ಷರ್ ಪಟೇಲ್ 5ನೇ ವಿಕೆಟ್​ಗೆ ಸ್ಟಬ್ಸ್ ಜೊತೆಗೂಡಿ 47 ರನ್​ ಸೇರಿಸಿ ರಿಟೈರ್ಡ್ ಔಟ್ ಆದರು. ಅಂತಿಮವಾಗಿ ಡೇವಿಡ್ ಮಿಲ್ಲರ್ ಹಾಗೂ ಟ್ರಿಸ್ಟಾನ್ ಸ್ಟಬ್ಸ್ ತಂಡವನ್ನು ಗೆಲುವಿನ ದಡ ಸೇರಿಸಿದರು. ಟ್ರಿಸ್ಟಾನ್ ಸ್ಟಬ್ಸ್ 60 ಮಿಲ್ಲರ್ 22 ರನ್ ಗಳಿಸಿ ಅಜೇಯರಾಗಿ ಉಳಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !