September 16, 2026
Wednesday, September 16, 2026
spot_img

18 ಕೋಟಿಯ ಸರದಾರ ಬಂದಾಯ್ತು! ಕೆಕೆಆರ್ ಪಡೆಯಲ್ಲಿ ಇನ್ಮುಂದೆ ‘ಪತಿರಾನ’ ಹವಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸತತ ಸೋಲುಗಳಿಂದ ಕಂಗೆಟ್ಟಿರುವ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಇದೀಗ ಆನೆ ಬಲ ಬಂದಂತಾಗಿದೆ. ಶ್ರೀಲಂಕಾದ ಸ್ಟಾರ್ ವೇಗಿ ಮಥೀಷ ಪತಿರಾನ ತಂಡವನ್ನು ಸೇರಿಕೊಂಡಿದ್ದು, ಕೆಕೆಆರ್ ಮರಳಿ ಗೆಲುವಿನ ಹಳಿಗೆ ಮರಳುವ ವಿಶ್ವಾಸದಲ್ಲಿದೆ.

ಟಿ20 ವಿಶ್ವಕಪ್ ವೇಳೆ ಸ್ನಾಯು ಸೆಳೆತಕ್ಕೆ ಒಳಗಾಗಿದ್ದ ಪತಿರಾನ, ಇದೀಗ ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ. ಶ್ರೀಲಂಕಾ ಕ್ರಿಕೆಟ್ ಮಂಡಳಿಯಿಂದ ಎನ್‌ಒಸಿ ಪಡೆದಿರುವ ಅವರು ಭಾನುವಾರ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದ ವೇಳೆಗೆ ತಂಡದೊಂದಿಗೆ ಇರಲಿದ್ದಾರೆ. ಆದರೆ, ತಕ್ಷಣವೇ ಕಣಕ್ಕಿಳಿಯುವ ಬದಲು, ಒಂದು ಅಥವಾ ಎರಡು ಅಭ್ಯಾಸ ಪಂದ್ಯಗಳ ನಂತರ ಅವರ ಫಿಟ್ನೆಸ್ ಪರಿಶೀಲಿಸಿ ಆಡುವ 11ರ ಬಳಗಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ.

ಹರಾಜಿನಲ್ಲಿ 18 ಕೋಟಿ ರೂ. ಮೊತ್ತಕ್ಕೆ ಕೆಕೆಆರ್ ಪಾಲಾಗಿದ್ದ ಈ ಸ್ಲಿಂಗರ್ ವೇಗಿಯ ಆಗಮನ, ಬೌಲಿಂಗ್ ಸಮಸ್ಯೆಯಿಂದ ಬಳಲುತ್ತಿದ್ದ ತಂಡಕ್ಕೆ ದೊಡ್ಡ ಸಮಾಧಾನ ತಂದಿದೆ. ಅಜಿಂಕ್ಯ ರಹಾನೆ ನೇತೃತ್ವದ ತಂಡ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದು, ಪತಿರಾನ ಬೌಲಿಂಗ್ ಮ್ಯಾಜಿಕ್ ತಂಡದ ಹಣೆಬರಹ ಬದಲಿಸುತ್ತದೆಯೇ ಎಂದು ಕಾದು ನೋಡಬೇಕಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !