September 16, 2026
Wednesday, September 16, 2026
spot_img

ಐಪಿಎಲ್ ಇತಿಹಾಸದಲ್ಲೇ ‘ಅನ್-ಲಕ್ಕಿ’ ಕ್ಯಾಪ್ಟನ್ ಪಟ್ಟಕ್ಕೇರಿದ ಇಶಾನ್ ಕಿಶನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಇದುವರೆಗೆ 73ಕ್ಕೂ ಹೆಚ್ಚು ನಾಯಕರುಗಳು ವಿವಿಧ ತಂಡಗಳನ್ನು ಮುನ್ನಡೆಸಿದ್ದಾರೆ. ಆದರೆ, ಸನ್ ರೈಸರ್ಸ್ ಹೈದರಾಬಾದ್ ತಂಡದ ಹಂಗಾಮಿ ನಾಯಕ ಇಶಾನ್ ಕಿಶನ್ ಮಾತ್ರ ಯಾರೂ ಇಚ್ಚಿಸದ ಅತೀ ದೊಡ್ಡ ‘ದುರಾದೃಷ್ಟ’ದ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಏಪ್ರಿಲ್ 18 ರಂದು ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಇಶಾನ್ ಕಿಶನ್ ಮತ್ತೊಮ್ಮೆ ಟಾಸ್ ಸೋಲುವ ಮೂಲಕ, ಐಪಿಎಲ್ ಇತಿಹಾಸದಲ್ಲೇ ತಾವು ನಾಯಕತ್ವ ವಹಿಸಿದ ಮೊದಲ ಸತತ ಆರು ಪಂದ್ಯಗಳಲ್ಲೂ ಟಾಸ್ ಸೋತ ಏಕೈಕ ನಾಯಕ ಎಂಬ ಅಪಕೀರ್ತಿಗೆ ಒಳಗಾಗಿದ್ದಾರೆ.

ಇದಕ್ಕೂ ಮುನ್ನ ಈ ‘ನತದೃಷ್ಟ’ ದಾಖಲೆ ಡೇವಿಡ್ ಮಿಲ್ಲರ್ ಹೆಸರಿನಲ್ಲಿತ್ತು. 2016ರಲ್ಲಿ ಪಂಜಾಬ್ ತಂಡದ ನಾಯಕರಾಗಿದ್ದ ಮಿಲ್ಲರ್ ಸತತ 5 ಪಂದ್ಯಗಳಲ್ಲಿ ಟಾಸ್ ಸೋತಿದ್ದರು. ಈಗ ಇಶಾನ್ ಆ ದಾಖಲೆಯನ್ನು ಹಿಂದಿಕ್ಕಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.

ಅಚ್ಚರಿಯ ವಿಷಯವೆಂದರೆ, ಟಾಸ್ ಸೋಲಿನಲ್ಲಿ ಕಿಶನ್ ದಾಖಲೆ ಬರೆದಿದ್ದರೂ, ಮೈದಾನದ ಆಟದಲ್ಲಿ ಅವರ ನಾಯಕತ್ವ ಯಶಸ್ವಿಯಾಗಿದೆ. ಆಡಿದ 6 ಪಂದ್ಯಗಳಲ್ಲಿ ಹೈದರಾಬಾದ್ ತಂಡ 3 ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ. ‘ಟಾಸ್ ಸೋತರೂ ಮ್ಯಾಚ್ ಗೆಲ್ಲಬಲ್ಲೆ’ ಎಂಬುದನ್ನು ಕಿಶನ್ ಸಾಬೀತುಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !