ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಬಿಸಿಲು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಬೀದರ್‌ನಲ್ಲಿ ವ್ಯಕ್ತಿಯೋರ್ವ ಏಕಾಏಕಿ ಕುಸಿದು ಬಿದ್ದಿದ್ದು, ಬಿಸಿಲಿನ ಝಳದಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಕಮಲನಗರದ ಬಳಿಯ ಡಿಗ್ಗಿ ಗ್ರಾಮಕ್ಕೆ ತೆರಳುವ ರಾಷ್ಟ್ರೀಯ ಹೆದ್ದಾರಿ-೫೦ರಲ್ಲಿ ಈ ಘಟನೆ ನಡೆದಿದೆ. ಇಪ್ಪತ್ತು ವರ್ಷದ, ಉತ್ತರ ಪ್ರದೇಶದ ಮೂಲದ ಮೊಹ್ಮದ್ ಸಮೀರ್ ಲಯಿಕ್ ಅಹ್ಮದ್ ಮೃತರು. ಇವರು ಕಮಲಾನಗರದ ಸಲೂನ್‌ನಲ್ಲಿ ಕೆಲಸ ಮಾಡುತ್ತಿದ್ದರು.
ಸಮೀರ ಮೆಕ್ಯಾನಿಕ್ ಅಂಗಡಿ ಬಳಿ ಬಂದು ನಿಂತಿದ್ದಾರೆ. ನಂತರ ನೀರು ಕುಡಿದು ತಲೆ ಸುತ್ತುತ್ತಿದೆ ಎಂದು ಹೇಳಿ ರೆಸ್ಟ್ ಮಾಡಿದ್ದಾರೆ. ನಂತರ ಸ್ವಲ್ಪ ಆರಾಮಾದಂತೆ ಆಗಿ ಡಿಗ್ಗಿ ಗ್ರಾಮಕ್ಕೆ ವಾಪಾಸ್ ಹೋಗುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆಯೇ ಕುಸಿದು ಬಿದ್ದಿದ್ದಾರೆ. ತಕ್ಷಣ ಜನ ನೆರವಿಗೆ ಬಂದಿದ್ದಾರೆ. ಆದರೆ ಅಷ್ಟರೊಳಗಾಗಲೇ ಪ್ರಾಣ ಹೋಗಿತ್ತು ಎನ್ನಲಾಗಿದೆ.
ತಾಪಮಾನ ಏರಿಕೆಯಿಂದಾಗಿ ಹೀಟ್‌ಸ್ಟ್ರೋಕ್ ಆಗಿ ಅವರು ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ. ಮರಣೋತ್ತರ ಪರೀಕ್ಷೆ ನಂತರ ನಿಖರ ಕಾರಣ ತಿಳಿಯಲಿದೆ.



