July 26, 2026
Sunday, July 26, 2026
spot_img

ಜೆಡಿಎಸ್ ಸೇರ್ತಾರಾ ಸಚಿವ ಜಮೀರ್‌? ಈ ಕುರಿತು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ರಾಜಕಾರಣದಲ್ಲಿ ಸದ್ಯ ಸಚಿವ ಜಮೀರ್‌ ಅವರ ಪಕ್ಷಾಂತರದ ಸುದ್ದಿ ಹರಿದಾಡುತ್ತಿದ್ದು, ಕಾಂಗ್ರೆಸ್ ಗೆ ಗುಡ್ ಬೈ ಹೇಳಿ ಮತ್ತೆ ಜೆಡಿಎಸ್ ಪಕ್ಷ ಸೇರುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಇದರ ನಡುವೆ ಈ ಸುದ್ದಿಗಳಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ವಿರಾಮ ಹಾಡಿದ್ದು, ಮಾಡಿದ ತಪ್ಪನ್ನು ನಾವು ಮತ್ತೆ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷದ ಯಾವ ವ್ಯಕ್ತಿಯೂ ನಮ್ಮನ್ನು ಸಂಪರ್ಕ ಮಾಡಿಲ್ಲ. ಹಾಗಾಗಿ ಅದೆಲ್ಲವೂ ಕೇವಲ ಗಾಳಿ ಸುದ್ದಿ ಎಂದು ತಿಳಿಸಿದರು.

ನಮ್ಮ ಪಕ್ಷದಲ್ಲಿ ಯಾರನ್ನು ಸೇರಿಸಬೇಕೆಂದು ನಿರ್ಧರಿಸುವುದು ನಾನೇ. ಹಾಗಾಗಿ ನನ್ನ ಜೊತೆ ಯಾರು ಮಾತನಾಡಿಲ್ಲ. ಅದರಲ್ಲೂ ನೀವು ಹೇಳಿದ ವ್ಯಕ್ತಿಯೂ ಕೂಡ ನಮ್ಮ ಜೊತೆ ಸಂಪರ್ಕ ಮಾಡಿಲ್ಲ. ಆ ತಪ್ಪನ್ನು ಮತ್ತೆ ನಾವು ಮಾಡುವುದಿಲ್ಲ ಎಂದು ಹೇಳುವ ಮೂಲಕ ಗಾಳಿ ಸುದ್ದಿಗಳಿಗೆ ತೆರೆ ಎಳೆದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !