October 15, 2026
Thursday, October 15, 2026
spot_img

ಬಿಸಿಲಿನ ಕಾಟದ ನಡುವೆ ಮಳೆಯ ಮುನ್ಸೂಚನೆ: ಒಂದು ವಾರ ರಾಜ್ಯಕ್ಕೆ ‘ರಿಲೀಫ್’ ಸಾಧ್ಯತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಹೆಚ್ಚುತ್ತಿರುವ ತಾಪಮಾನ ಜನರನ್ನು ಸಂಕಷ್ಟಕ್ಕೆ ತಳ್ಳಿದರೂ, ಈಗ ಸ್ವಲ್ಪ ನಿರಾಳತೆ ನೀಡುವ ಸೂಚನೆ ಕಾಣಿಸಿಕೊಂಡಿದೆ. ಕರ್ನಾಟಕದ ಹಲವು ಭಾಗಗಳಲ್ಲಿ 40 ಡಿಗ್ರಿ ಮೀರಿ ಬಿಸಿಲು ಕಾಡುತ್ತಿರುವ ನಡುವೆಯೇ ಮುಂದಿನ ಒಂದು ವಾರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ ತಾಪಮಾನ ಗರಿಷ್ಠ ಮಟ್ಟ ತಲುಪಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಇದೇ ವೇಳೆ ವಾತಾವರಣದ ಅಸ್ಥಿರತೆ ಕಾರಣದಿಂದ ಅಕಾಲಿಕ ಮಳೆಯ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಉತ್ತರ ಭಾಗಗಳಲ್ಲಿ ತುಸು ಮಳೆಯ ಲಕ್ಷಣಗಳು ಕಂಡುಬಂದಿದ್ದು, ಮುಂದಿನ ದಿನಗಳಲ್ಲಿ ಮಳೆ ಪ್ರಮಾಣ ಹೆಚ್ಚಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ:

ಬಿಸಿಲಿನ ಪರಿಣಾಮವಾಗಿ ಹಗಲು-ರಾತ್ರಿ ಉಷ್ಣಾಂಶ ಹೆಚ್ಚಾಗಿ, ಕೆರೆ-ಬಾವಿಗಳು ಒಣಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ನೀರಿನ ಕೊರತೆ ಎದುರಾಗುವ ಆತಂಕವೂ ಇದೆ. ಜನರು ಅನಗತ್ಯವಾಗಿ ಬಿಸಿಲಿನಲ್ಲಿ ಸಂಚರಿಸುವುದನ್ನು ತಪ್ಪಿಸಿಕೊಳ್ಳಬೇಕು ಎಂದು ಸಲಹೆ ನೀಡಲಾಗಿದೆ.

Must Read