ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ನೆಲಮಂಗಲದ ವೀವರ್ಸ್ ಕಾಲೋನಿಯಲ್ಲಿ ವ್ಯಕ್ತಿಯೊಬ್ಬರು ಸಾಲ ಮಾಡಿ ತೆಗೆದುಕೊಂಡಿದ್ದ ಹೊಸ ಬೈಕ್ ಕಳುವಾಗಿದೆ.
ಚಂದು ಎನ್ನುವ ಯುವಕ ಬಹಳ ದಿನಗಳಿಂದ ಸ್ವಲ್ಪ ಹಣ ಕೂಡಿಟ್ಟು ಇನ್ನು ಸ್ವಲ್ಪ ಲೋನ್ ಮಾಡಿ ತಮ್ಮ ಕನಸಿನ ಬೈಕ್ ಖರೀದಿಸಿದ್ದರು. ಚಂದು ರಾತ್ರಿ ಬೈಕ್ನ್ನು ಮನೆಯ ಮುಂದೆ ನಿಲ್ಲಿಸಿದ್ದರು.
ರಾತ್ರಿ ಖದೀಮರ ಗ್ಯಾಂಗ್ ಒಂದು ಹೊಸ ಬೈಕ್ನ್ನು ಕಂಡು ಪ್ಲಾನಿಂಗ್ ಮಾಡಿಕೊಂಡು ಅದನ್ನು ಕದ್ದು ಪರಾರಿಯಾಗಿದೆ. ಮನೆಯ ಮುಂದೆ ಲಾಕ್ ಮಾಡಿ ಇಟ್ಟಿದ್ದರೂ ಬೈಕ್ ಕಳುವಾಗಿರುವುದನ್ನು ನೆನೆದು ಚಂದು ಕಣ್ಣೀರಿಟ್ಟಿದ್ದಾರೆ.
ಸಿಸಿಟಿವಿ ಕ್ಯಾಮರಾದಲ್ಲಿ ಖದೀಮರ ಗ್ಯಾಂಗ್ ಕಾಣಿಸಿದೆ. ಚಂದು ಠಾಣೆಗೆ ದೂರು ನೀಡಿದ್ದಾರೆ. ಇನ್ನು ಬೈಕ್ನ ಸಾಲವೇ ಸಾಕಷ್ಟಿದೆ. ದಯವಿಟ್ಟು ಬೈಕ್ ಹುಡುಕಿಕೊಡಿ ಎಂದು ಪೊಲೀಸರಿಗೆ ಮನವಿ ಮಾಡಿದ್ದಾರೆ.



