November 17, 2026
Tuesday, November 17, 2026
spot_img

ಅರಕಲಗೂಡು ತಾಲೂಕಿನಲ್ಲಿ ಚಿರತೆ ಅಟ್ಟಹಾಸ: ಕೊಟ್ಟಿಗೆಯಲ್ಲಿದ್ದ ಕುರಿಗಳನ್ನು ಕೊಂ*ದ ವ್ಯಾಘ್ರ

ಹೊಸದಿಗಂತ ವರದಿ ಕೊಣನೂರು:

ಕೊಟ್ಟಿಗೆಗೆ ನುಗ್ಗಿದ ಚಿರತೆಯೊಂದು ಐದು ಹೋತಗಳನ್ನು ಕೊಂದು ಹಾಕಿರುವ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ರಾಮನಾಥಪುರ ಸಮೀಪದ ಜೆ.ಹೊಸಳ್ಳಿಯಲ್ಲಿ ನಡೆದಿದೆ.

ಗ್ರಾಮದ ರೈತ ದಶರಥ ಎಂಬುವವರಿಗೆ ಸೇರಿದ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ನಾಲ್ಕು ಮೇಕೆಗಳನ್ನು ಚಿರತೆ ಕಚ್ಚಿ ಕೊಂದು ಹಾಕಿದೆ. ಮತ್ತೊಂದು ಹೋತವನ್ನು ಸಮೀಪದ ಜಮೀನಿಗೆ ಎಳೆದೊಯ್ದು ತಿಂದು ಹಾಕಿದೆ. ಬೆಳಿಗ್ಗೆ ಕೊಟ್ಟಿಗೆಗೆ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ. ಘಟನೆಯಿಂದ ಸುಮಾರು 75 ಸಾವಿರ ರೂ ಮೌಲ್ಯದ ಹೋತಗಳನ್ನು ಕಳೆದುಕೊಂಡಿರುವ ರೈತ ದಶರಥ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಪರಿಶೀಲನೆ ನಡೆಸಿ, ಚಿರತೆಯನ್ನು ಸೆರೆಹಿಡಿಯಲು ಬೋನು ಇರಿಸಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಸಮೀಪದ ರುದ್ರಪಟ್ಟಣದ ಬಳಿ ಕಾಣಿಸಿಕೊಂಡಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆಹಿಡಿದಿದ್ದರು. ಇದೀಗ ಜೆ.ಹೊಸಳ್ಳಿಯಲ್ಲಿ ಮತ್ತೊಂದು ಚಿರತೆ ದಾಳಿ ನಡೆಸಿರುವುದರಿಂದ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ.

ತೋಟಗಳಿಂದ ಸುತ್ತುವರಿದಿರುವ ಗ್ರಾಮದಲ್ಲಿ ಚಿರತೆ ಸಂಚಾರದಿಂದ ಜನರು ಹಾಗೂ ಜಾನುವಾರುಗಳಿಗೆ ಅಪಾಯ ಎದುರಾಗುವ ಭೀತಿ ಉಂಟಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಚಿರತೆಯನ್ನು ಸೆರೆಹಿಡಿದು ಗ್ರಾಮಸ್ಥರ ಆತಂಕ ದೂರ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Must Read

Skip to toolbar