ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರರಾಜಧಾನಿಯ ನೆತ್ತಿ ಬಿಸಿಲಿನಿಂದ ಸುಟ್ಟುಹೋಗುತ್ತಿದೆ. ಹೀಟ್‌ವೇವ್‌ನಿಂದಾಗಿ ಜನ ಹೈರಾಣಾಗಿದ್ದಾರೆ. ಈ ಬಿಸಿಲಿನಲ್ಲಿ ಮಕ್ಕಳ ಆರೋಗ್ಯ ರಕ್ಷಣೆ ಅತ್ಯವಶ್ಯಕವಾಗಿದ್ದು, ಶಾಲೆಗಳಲ್ಲಿ ಗಂಟೆಗೊಮ್ಮೆ ವಾಟರ್‌ಬ್ರೇಕ್ ನೀಡಲಾಗುತ್ತಿದೆ.
ದೆಹಲಿಯ ಎಲ್ಲ ಶಾಲೆಗಳಲ್ಲಿಯೂ ಬೆಳಗ್ಗೆ ಮಾಡುವ ಪ್ರಯರ್‌ನ್ನು ಹೊರಾಂಗಣದ ಬದಲಾಗಿ ಕ್ಲಾಸ್‌ರೂಮ್‌ಗಳ ಒಳಗೆ ಮಾಡಲಾಗುತ್ತಿದೆ. ಇನ್ನು ಶಿಕ್ಷಣ ಇಲಾಖೆ ಈ ಸುತ್ತೋಲೆಯನ್ನು ಎಲ್ಲೆಡೆ ಕಳುಹಿಸಿದ್ದು, ಮಕ್ಕಳಿಗೆ ಕಡ್ಡಾಯವಾಗಿ ಗಂಟೆಗೊಮ್ಮೆ ವಾಟರ್ ಬ್ರೇಕ್ ನೀಡಬೇಕು ಎಂದು ಹೇಳಿದೆ.
ಶಾಲೆಗೆ ಬರುವಾಗ ಮಕ್ಕಳು ಕೇವಲ ಅರ್ಧ ಲೀಟರ್ ಬಾಟಲಿಯನ್ನು ತರುತ್ತಾರೆ. ಇಲ್ಲವೇ ಊಟದ ನಂತರ ಮಾತ್ರ ನೀರನ್ನು ಕುಡಿಯುತ್ತಾರೆ. ಇದು ಅವರ ದೇಹ ಡೀಹೈಡ್ರೇಟ್ ಮಾಡಿಸುತ್ತದೆ. ಈ ಕಾರಣಕ್ಕಾಗಿ ಪ್ರತೀ ಪಿರಿಯಡ್ ನಂತರ ಒಮ್ಮೆ ನೀರು ಕುಡಿಯಲೇಬೇಕಿದೆ. ಶಿಕ್ಷಕರಿಗೆ ಮಕ್ಕಳು ಪದೇ ಪದೆ ನೀರು ಕುಡಿಯೋಕೆ ಹೋಗೋದು, ನಂತರ ವಾಶ್‌ರೂಮ್ ಬ್ರೇಕ್ ಕೇಳೋದು ಕಿರಿಕಿರಿ ಆಗುತ್ತದೆ. ಆದರೂ ಅವರ ಆರೋಗ್ಯವನ್ನು ಗಮನದಲ್ಲಿ ಇಟ್ಟುಕೊಳ್ಳಬೇಕಿದೆ.



