May 11, 2026
Monday, May 11, 2026
spot_img

WEATHER | ಇಷ್ಟು ದಿನದ ಬಿಸಿಲು ಒಂದು ಲೆಕ್ಕ, ಇನ್ಮೇಲೆ ಬರುವ ಬಿಸಿಲು ಇನ್ನೊಂದು ಲೆಕ್ಕ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದಲ್ಲಿ ಇಷ್ಟು ದಿನ ಇದ್ದ ಬಿಸಿಲಿಗೆ ಜನ ಹೈರಾಣಾಗಿ, ಸ್ವಲ್ಪವಾದ್ರೂ ಬಿಸಿಲು ಕಡಿಮೆ ಆಗ್ಬಾರ್ದಾ ಎಂದು ಅಂದುಕೊಳ್ತಿದ್ರು. ಆದರೆ ಇದೀಗ ಹವಾಮಾನ ಇಲಾಖೆ ಇದೆಲ್ಲ ಬಿಸಿಲೇ ಅಲ್ಲ, ಒಂದು ವಾರದಲ್ಲಿ ರಣಬಿಸಿಲು ಜನರನ್ನು ಕಾಡಲಿದೆ ಎಂದು ಹೇಳಿದೆ.

ಈಗಾಗಲೇ ಬಿಸಿಲಿನಿಂದ ಜನ ಜೀವನ ಮಾಡೋಕಾಗದಷ್ಟು ಸುಸ್ತಾಗಿದ್ದಾರೆ. ಆದರೆ ಇಷ್ಟು ದಿನ ಬಂದಿದ್ದು ಟ್ರೇಲರ್‌ ನೆಕ್ಸ್ಟ್‌ ಬರೋದು ಸಿನಿಮಾ ಎನ್ನುವಂತಹ ಪರಿಸ್ಥಿತಿ ಇದೆ.

ಅದರಲ್ಲಿಯೂ ರಾಯಚೂರು ಹಾಗೂ ಕಲಬುರಗಿ ಜನ ಬಿಸಿಲಿನಲ್ಲಿ ಬೆಂದು ಹೋಗಿದ್ದಾರೆ. ಬೆಂಗಳೂರಿನ ಸಾಫ್ಟ್‌ ಮಂದಿಗೆ 36-37 ಡಿಗ್ರಿ ಸೆಕೆಯೇ ಸಹಿಸಿಕೊಳ್ಳೋಕೆ ಆಗುತ್ತಿಲ್ಲ.

ಏನೇ ಇರಲಿ, ಆದಷ್ಟು ಹಗಲಿನ ಸಮಯ ಓಡಾಟ ತಪ್ಪಿಸಿ. ಚೆನ್ನಾಗಿ ನೀರು ಕುಡಿಯಿರಿ. ಹಣ್ಣು, ತರಕಾರಿ, ಲೈಟ್‌ ಆದ ಆಹಾರದಲ್ಲಿಯೇ ದಿನಗಳನ್ನು ತಳ್ಳಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !