ಹೊಸದಿಗಂತ ವರದಿ, ಬೀದರ್
ಸಂಸತ್ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಯವರಿಗೆ ಕರಿಯರು ಮತ್ತು ಬಿಳಿಯರ ನಡುವೆ ವ್ಯತ್ಯಾಸ ಗೊತ್ತಿಲ್ಲ. ಹಾಗೆಯೇ ಭಯೋತ್ಪಾದಕರು ಹಾಗೂ ಭಯೋತ್ಪಾದಕರಿಗೆ ಭಯ ಹುಟ್ಟಿಸುವವರ ಮಧ್ಯೆ ವ್ಯತ್ಯಾಸ ಗೊತ್ತಾಗುವುದಿಲ್ಲ ಎಂದು ಉಪರಾಷ್ಟ್ರಪತಿ ಸಿ. ಪಿ. ರಾಧಾಕೃಷ್ಣನ್ ಟೀಕಿಸಿದರು.
ಬೀದರ್ ತಾಲ್ಲೂಕಿನ ಭಾಲ್ಕಿಯಲ್ಲಿ ನಡೆದ ಡಾ.ಚನ್ನಬಸವ ಪಟ್ಟದೇವರು ಅವರ 75 ನೇ ವರ್ಷಗಳ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರ ಕುರಿತು ಮಲ್ಲಿಕಾರ್ಜುನ ಖರ್ಗೆ ಅವರು ನೀಡಿದ್ದ ಹೇಳಿಕೆಯನ್ನು ಪರೋಕ್ಷವಾಗಿ ಟೀಕಿಸಿದರು.
ಮಲ್ಲಿಕಾರ್ಜುನ ಖರ್ಗೆ ಹಾಗೂ ನಮ್ಮ ವಿಚಾರಧಾರೆಗಳ ನಡುವೆ ಸ್ವಲ್ಪ ಮಟ್ಟಿಗೆ ವ್ಯತ್ಯಾಸವಿದೆ. ಆದರೆ ನಾವಿಬ್ಬರು ಒಳ್ಳೆಯ ಸ್ನೇಹಿತರಾಗಿದ್ದೇವೆ ಎಂದು ಹೇಳಿದರು.
ಇದು ಬಸವಣ್ಣನವರ ಪವಿತ್ರ ನೆಲ, ಅವರ ಆಶಯಗಳಂತೆ ಭಾಲ್ಕಿ ಮಠ ಕೆಲಸ ಮಾಡುತ್ತಿದೆ. ಈ ಮಠ ಹಿರಿಯ ಸ್ವಾಮೀಜಿಗಳು ಬಸವಣ್ಣನವರ ತತ್ವಾದರ್ಶಗಳಂತೆ ಕೆಲಸ ಮಾಡುತ್ತಿದ್ದಾರೆ ಎಂದು ಉಪರಾಷ್ಟ್ರಪತಿ ಸಿ.ಪಿ ರಾಧಾಕೃಷ್ಣನ್ ಹೇಳಿದರು.



