April 23, 2026
Thursday, April 23, 2026
spot_img

ದಿನಭವಿಷ್ಯ: ಹದಗೆಟ್ಟ ಸಂಬಂಧವನ್ನು ಹಾಗೇ ಬಿಡಬೇಡಿ, ಇಂದೇ ಸರಿಪಡಿಸಿ

ಮೇಷ
ಮಾಡುವ ಕೆಲಸ ದಲ್ಲಿ ಸಫಲತೆ. ಆದರೆ ಸುಲಭದಲ್ಲಿ ಆಗದು. ಅಡ್ಡಿ, ವಿಳಂಬ ಸಾಧ್ಯತೆ. ಕೌಟುಂಬಿಕ ಮನಸ್ತಾಪ ನೆಮ್ಮದಿ ಕೆಡಿಸುವುದು.   ವೃಷಭ
ಭಿನ್ನಾಭಿಪ್ರಾಯ ನಿವಾರಣೆ. ಅನಿರೀಕ್ಷಿತ ವಿದ್ಯಮಾನ ಸಂಭವಿಸಿದರೆ ಅಂಜಬೇಡಿ. ವಿಶ್ವಾಸ ದಿಂದ ಎದುರಿಸಿ. ನೆರೆಮನೆ
ಯವರ ಕಿರಿಕಿರಿ.  
ಮಿಥುನ
ಹದಗೆಟ್ಟ ಸಂಬಂಧ ಸುಧಾರಿಸಲು ಆದ್ಯತೆ ಕೊಡಿ. ಬಿಗುಮಾನ ಬಿಟ್ಟು ವ್ಯವಹರಿಸಿ. ಸಣ್ಣ ವಿಷಯವೂ ಅತಿಯಾದ ಬೇಸರ ತರಬಹುದು.   ಕಟಕ
ವೃತ್ತಿ ಒತ್ತಡ ಕಡಿಮೆ ಮಾಡಲು ಯತ್ನಿಸಿ. ಇಲ್ಲವಾದರೆ ದೇಹದ ಮೇಲೂ ಪರಿಣಾಮ. ಮೆಚ್ಚಿನ ಹವ್ಯಾಸದಲ್ಲಿ ಚಿಂತೆ ಮರೆಯಿರಿ.            
ಸಿಂಹ
ನಿಮ್ಮ ಗುರಿ ಈಡೇರಬೇಕೆ? ವಸ್ತುಸ್ಥಿತಿ ಅರಿತು ವ್ಯವಹರಿಸಿ. ಆಕಾಶದಲ್ಲಿ ತೇಲಬೇಡಿ. ಮನೆಯವರ ಬೆಂಬಲ ಪಡೆಯಿರಿ.    
ಕನ್ಯಾ
ಇತರರ ಜತೆ ವಿನಯದಿಂದ ವರ್ತಿಸಿ. ಇಲ್ಲವಾದರೆ ನಿಷ್ಟುರ ಕಟ್ಟಿಕೊಳ್ಳುವಿರಿ. ಆರ್ಥಿಕ ವ್ಯವಹಾರ ತುಸು ಚಿಂತೆಗೆ ಕಾರಣವಾದೀತು.      
ತುಲಾ
ವೃತ್ತಿಯಲ್ಲಿ ಯಾವುದೇ ಕೆಲಸ ಬಾಕಿ ಉಳಿಸಬೇಡಿ. ವಿಳಂಬ ದೊಡ್ಡ ಹಾನಿ ತಂದೀತು. ಅನಾರೋಗ್ಯಕರ ಆಹಾರ ಸೇವಿಸಬೇಡಿ.  
ವೃಶ್ಚಿಕ
 ಮಾನಸಿಕ ಅಶಾಂತಿ. ಕೆಲಸದಲ್ಲಿ ನಿರಾಸಕ್ತಿ. ವ್ಯವಹಾರದಲ್ಲಿ ತೊಡಕು. ಎಲ್ಲರ ಜತೆ ಹೊಂದಾಣಿಕೆ ಬೆಳೆಸಿ. ಭಿನ್ನವಾಗಿ ವರ್ತಿಸಲು ಹೋಗದಿರಿ.    
ಧನು
ವೃತ್ತಿಯಲ್ಲಿ  ಯಶಸ್ಸು. ಮನೆಯಲ್ಲಿ ಸೌಹಾರ್ದ. ಬಂಧುಗಳ ಭೇಟಿ. ಧನವ್ಯಯ ಹೆಚ್ಚಾದರೂ ಬೇಸರ ಮೂಡದು.      
ಮಕರ
ನಿಮ್ಮ ಪಾಲಿಗೆ ಅಚ್ಚರಿಯ ಬೆಳವಣಿಗೆ ಉಂಟಾದೀತು. ಬಂಧು ಭೇಟಿಯಿಂದ ಸಂತೋಷ. ವೃತ್ತಿ ಸಮಸ್ಯೆಯೊಂದು ಪರಿಹಾರ ಕಾಣಲಿದೆ.     ಕುಂಭ
ಆದಾಯ ಹೆಚ್ಚಳದ ಸಂಕೇತ ತೋರಲಿದೆ. ಎಲ್ಲರಿಂದ ಉತ್ತಮ ಸಹಕಾರ ಪಡೆಯುವಿರಿ. ಆರೋಗ್ಯದ ಸಮಸ್ಯೆ ಕಡೆಗಣಿಸಬೇಡಿ.        
ಮೀನ
ಮನೆಯಲ್ಲಿ ಶಾಂತಿ, ಸೌಹಾರ್ದ. ಹಣದ ವ್ಯವಹಾರ ಸಫಲ. ಆರೋಗ್ಯದ ಚಿಂತೆ ಪರಿಹಾರ. ಮಕ್ಕಳ ಸಾಧನೆಯ ಖುಷಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !