September 16, 2026
Wednesday, September 16, 2026
spot_img

7 ಪಂದ್ಯ ಮಿಸ್ | MSD ಆಡೋದು ಡೌಟ್: ಅಭಿಮಾನಿಗಳಿಗೆ ಮತ್ತೆ ನಿರಾಸೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಆಟಗಾರ ಎಂಎಸ್ ಧೋನಿ ಮರಳುವಿಕೆಗೆ ಇನ್ನೂ ನಿರೀಕ್ಷೆಯೇ ಮುಂದುವರಿದಿದೆ. ಆರಂಭದಲ್ಲಿ ಎರಡು ವಾರ ಮಾತ್ರ ಲಭ್ಯವಿರುವುದಿಲ್ಲವೆಂದು ತಿಳಿಸಿದ್ದರೂ, ಈಗಾಗಲೇ ಏಳು ಪಂದ್ಯಗಳನ್ನು ಅವರು ಮಿಸ್ ಮಾಡಿದ್ದಾರೆ.

ಇತ್ತೀಚೆಗೆ ನೆಟ್ ಪ್ರ್ಯಾಕ್ಟಿಸ್ ಮಾಡುತ್ತಿರುವ ಧೋನಿಯ ವಿಡಿಯೋ ವೈರಲ್ ಆದ ಬಳಿಕ, ಮುಂಬೈ ವಿರುದ್ಧದ ಪಂದ್ಯದಲ್ಲಿ ಅವರು ಆಡುತ್ತಾರೆ ಎಂಬ ನಿರೀಕ್ಷೆ ಹೆಚ್ಚಾಗಿತ್ತು. ಆದರೆ ಅದು ನಿಜವಾಗಲಿಲ್ಲ. ಈ ಬಗ್ಗೆ ಸಿಎಸ್‌ಕೆ ಬ್ಯಾಟಿಂಗ್ ಕೋಚ್ ಮೈಕಲ್ ಹಸ್ಸಿ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ:

ಧೋನಿ ಚೇತರಿಸಿಕೊಳ್ಳುತ್ತಿದ್ದಾರೆ ಆದರೆ ಸಂಪೂರ್ಣ ಫಿಟ್ ಆಗುವವರೆಗೆ ಮೈದಾನಕ್ಕಿಳಿಯುವುದಿಲ್ಲ ಎಂದು ಹಸ್ಸಿ ಹೇಳಿದ್ದಾರೆ. ಬ್ಯಾಟಿಂಗ್‌ನಲ್ಲಿ ಅವರು ಉತ್ತಮವಾಗಿದ್ದರೂ, ಓಡುವ ಸಾಮರ್ಥ್ಯವೇ ಮುಖ್ಯ ಸವಾಲಾಗಿದೆ ಎಂದಿದ್ದಾರೆ.
ಧೋನಿ ಯಾವಾಗ ಮರಳುತ್ತಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಲೀಗ್‌ನಲ್ಲಿ ಉಳಿದಿರುವ ಪಂದ್ಯಗಳಲ್ಲಿ ಅವರ ಆಗಮನದ ನಿರೀಕ್ಷೆಯಲ್ಲೇ ಅಭಿಮಾನಿಗಳು ಕಾಯುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !