April 24, 2026
Friday, April 24, 2026
spot_img

ಸಾಂಬಾರ್‌ ಪಾತ್ರೆಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಮಗುವನ್ನು ರಕ್ಷಿಸಿದ ಪೊಲೀಸರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಆಟವಾಡುತ್ತಾ ಸಾಂಬಾರ್‌ ಪಾತ್ರೆಯೊಳಗೆ ಸಿಲುಕಿಕೊಂಡಿದ್ದ ಕಂದಮ್ಮನನ್ನು ಪೊಲೀಸರು ರಕ್ಷಿಸಿದ ತಿರುವನಂತಪುರಂನಲ್ಲಿ ನಡೆದಿದೆ.

ಆಟ ಆಡುತ್ತಾ ಅಲ್ಯುಮಿನಿಯಂ ಪಾತ್ರೆಯ ಒಳಗೆ ಕಾಲನ್ನು ಮಗು ಇಟ್ಟಿದೆ. ಅದಾದ ನಂತರ ಮಗುವಿನ ಸೊಂಟದ ಕೆಳಗಿನ ಭಾಗ ಪಾತ್ರೆಯಲ್ಲಿ ಸ್ಟ್ರಕ್‌ ಆಗಿದೆ. ಪೋಷಕರು ಎಷ್ಟೇ ಕಷ್ಟಪಟ್ಟರೂ ಕಾಲನ್ನು ಹೊರಕ್ಕೆ ತೆಗೆಯಲು ಆಗಿಲ್ಲ.

ಮಗು ಜೋರು ಅಳೋದಕ್ಕೆ ಶುರು ಮಾಡಿದ್ದು, ಕಾಲು ನೋವು ಹಾಗೂ ಭಯದಿಂದ ಒದ್ದಾಡಿದೆ. ತಕ್ಷಣ ಪೋಷಕರು ಪೊಲೀಸರು ಹಾಗೂ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಸಹಾಯ ಕೇಳಿದ್ದಾರೆ.

ತಕ್ಷಣವೇ ಮನೆಗೆ ಬಂದ ಸಿಬ್ಬಂದಿ ಮಗುವಿಗೆ ಒಂದು ಸಣ್ಣ ಗಾಯವೂ ಆಗದಂತೆ ಹೈಡ್ರಾಲಿಕ್‌ ಕಟರಗಳನ್ನು ಬಳಸಿ ಪಾತ್ರೆಯನ್ನು ಕತ್ತರಿಸಿದ್ದಾರೆ. ಮಗು ಇದೀಗ ಆರೋಗ್ಯವಾಗಿದೆ. ದೊಡ್ಡ ಕೇಸ್‌ ಅಥವಾ ದೊಡ್ಡ ಅನಾಹುತ ಅಲ್ಲದೇ ಇದ್ದರೂ ಮನೆಗೆ ಬಂದು ಮಗುವನ್ನು ಬಚಾವ್‌ ಮಾಡಿ ಮಾನವೀಯತೆ ಮೆರೆದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗೆ ಧನ್ಯವಾದಗಳನ್ನು ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !