August 29, 2026
Saturday, August 29, 2026
spot_img

ಆಟೋ ಸ್ವಲ್ಪ ಪಕ್ಕಕ್ಕೆ ಹಾಕಿ ಸ್ವಾಮೀ…! ಅಂದಿದ್ದಕ್ಕೆ ಜಗಳ: ಸಹೋದರರ ಮೇಲೆ ಮನಸೋಇಚ್ಚೆ ಹಲ್ಲೆ

ಹೊಸದಿಗಂತ ವರದಿ ಕಲಬುರಗಿ:

ರಸ್ತೆ ಮೇಲೆ ನಿಲ್ಲಿಸಿದ್ದ ಆಟೋವನ್ನು ಪಕ್ಕಕ್ಕೆ ಹಾಕುವಂತೆ ಕೇಳಿದ ವಿಚಾರಕ್ಕೆ ಗಲಾಟೆ ಉಂಟಾಗಿ, ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆದ ಘಟನೆ ಕಲಬುರಗಿ ತಾಲೂಕಿನ ಭೀಮಳ್ಳಿ ಗ್ರಾಮದಲ್ಲಿ ನಡೆದಿದೆ.

ಚಿತ್ತಾಪುರ ತಾಲೂಕಿನ ನಾಲವಾರ ಗ್ರಾಮದ ನಿವಾಸಿಗಳಾದ ತೋಟೆಂದ್ರ ಮತ್ತು ಸುನೀಲ್ ಎಂಬ ಸಹೋದರರು ತಮ್ಮ ಸಹೋದರಿಯ ಮನೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಭೀಮಳ್ಳಿ ಗ್ರಾಮಕ್ಕೆ ತೆರಳಿದ್ದರು. ಕಾರ್ಯಕ್ರಮ ಮುಗಿಸಿಕೊಂಡು ಸಹೋದರಿಯನ್ನು ಮನೆಗೆ ಬಿಡಲು ಕಾರಿನಲ್ಲಿ ವಾಪಸ್ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ಇದನ್ನೂ ಓದಿ:

ರಸ್ತೆಯ ಮಧ್ಯೆ ಆಟೋ ನಿಲ್ಲಿಸಿದ್ದರಿಂದ ಅದನ್ನು ಪಕ್ಕಕ್ಕೆ ಹಾಕುವಂತೆ ಕೇಳಿದಾಗ ಮಾತಿನ ಚಕಮಕಿ ಉಂಟಾಗಿ, ಬಳಿಕ ಗಲಾಟೆಗೆ ತಿರುಗಿದೆ. ಈ ವೇಳೆ ಆರೋಪಿಗಳು ಕಟ್ಟಿಗೆ ದೊಣ್ಣೆಯಿಂದ ತೋಟೆಂದ್ರ ಮತ್ತು ಸುನೀಲ್ ಮೇಲೆ ಮನಸೋಇಚ್ಚೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಇಬ್ಬರು ಸಹೋದರರಿಗೆ ಗಾಯಗಳಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಕುರಿತು ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !