August 26, 2026
Wednesday, August 26, 2026
spot_img

IPL | ಗೆಲುವಿನ ಗುಟ್ಟು ಬಿಚ್ಚಿಟ್ಟ ಪಾಟಿದಾರ್: ಅವರೇ ಈ ಪಂದ್ಯದ ಹೀರೋ ಅಂತ ಹೊಗಳಿದ್ದೇ ಹೊಗಳಿದ್ದು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗುಜರಾತ್ ಟೈಟಾನ್ಸ್ ವಿರುದ್ಧದ ಭರ್ಜರಿ ಗೆಲುವಿನ ಬಳಿಕ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ತಂಡದ ಸಮೂಹ ಪ್ರದರ್ಶನವನ್ನು ಮೆಚ್ಚಿಕೊಂಡಿದ್ದಾರೆ. ವಿಶೇಷವಾಗಿ ವೇಗಿಗಳ ನಿಖರ ಬೌಲಿಂಗ್ ಪಂದ್ಯದಲ್ಲಿ ದೊಡ್ಡ ತಿರುವು ತಂದಿತು ಎಂದು ಅವರು ಹೇಳಿದ್ದಾರೆ.

ಆರಂಭದಲ್ಲಿ ಭುವನೇಶ್ವರ್ ಕುಮಾರ್ ಮತ್ತು ಹೇಜಲ್‌ವುಡ್ ಉತ್ತಮ ನಿಯಂತ್ರಣ ತೋರಿದರು. ಮಧ್ಯಮ ಓವರ್‌ಗಳಲ್ಲಿ ಸುಯಶ್ ಶರ್ಮಾ ರನ್‌ ವೇಗ ತಗ್ಗಿಸಿದರು. ಡೆತ್ ಓವರ್‌ಗಳಲ್ಲಿ ನಿಖರ ಯಾರ್ಕರ್‌ಗಳ ಮೂಲಕ ಎದುರಾಳಿಯನ್ನು ನಿಯಂತ್ರಣದಲ್ಲಿಟ್ಟದ್ದು ಗೆಲುವಿಗೆ ಕಾರಣವಾಯಿತು ಎಂದು ಪಾಟಿದಾರ್ ಹೇಳಿದರು.

ಇದನ್ನೂ ಓದಿ:

ಚೇಸಿಂಗ್ ವೇಳೆ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಆಡಿದ ಸ್ಫೋಟಕ ಆಟವನ್ನೂ ಅವರು ಶ್ಲಾಘಿಸಿದರು. ‘ಅವರ ವೇಗದ ಬ್ಯಾಟಿಂಗ್ ಗುರಿ ಬೆನ್ನಟ್ಟುವುದನ್ನು ಸುಲಭಗೊಳಿಸಿತು’ ಎಂದರು.

ಮಧ್ಯಮ ಕ್ರಮಾಂಕದಲ್ಲಿ ಸತತ ವಿಕೆಟ್ ಕಳೆದುಕೊಂಡಿರುವುದು ಮಾತ್ರ ಚಿಂತೆಯ ವಿಷಯವಾಗಿದ್ದು, ಮುಂದಿನ ಪಂದ್ಯಗಳಲ್ಲಿ ಅದನ್ನು ಸರಿಪಡಿಸಿಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದರು. ಈ ಜಯದೊಂದಿಗೆ ಆರ್‌ಸಿಬಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !