ಹೊಸದಿಗಂತ ವರದಿ ಉತ್ತರ ಕನ್ನಡ:
ಮುಂಡಗೋಡ ಪಟ್ಟಣದ ಬಸ್ ನಿಲ್ದಾಣದ ಎದುರಿನ ಅಂಬಿಕಾ ಹೊಟೆಲ್‌ನಲ್ಲಿ ಊಟಕ್ಕೆ ಬಂದಿದ್ದ ಜಮೀರ್ ಅಹ್ಮದ್ ದರ್ಗಾವಾಲೆನನ್ನು (ಎನ್.ಎಂ.ಡಿ) ನಾಲ್ಕೈದು ಜನ ಹಂತಕರು ಭೀಕರ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
ಜಮೀರ್ ಅಹ್ಮದ್ ತನ್ನ ಒಬ್ಬ ಸ್ನೇಹಿತನ ಜತೆ ಶುಕ್ರವಾರ ರಾತ್ರಿ 11 ಗಂಟೆಗೆ ಅಂಬಿಕಾ ಹೋಟೆಲ್‌ನಲ್ಲಿ ಊಟಕ್ಕೆ ಬಂದಿದ್ದ ಈ ವೇಳೆ ತನ್ನ ಸ್ನೇಹಿತನಿಗೆ ಸಿಗರೇಟ್ ತರಲು ಹೊರಗೆ ಕಳಸಿದ್ದ. ಆ ವೇಳೆ ಹಂತಕರು ನಾಲ್ಕೈದು ಜನ ಹಂತಕರು ಏಕಾಏಕಿ ಹೊಟೇಲ್ ಗೆ ನುಗ್ಗಿ ಜಮೀರನಿಗೆ ಖಾರದಪುಡಿ ಎರಚಿದ್ದಾರೆ. ಇವರಿಂದ ತಪ್ಪಸಿಕೊಳ್ಳಲು ಜಮೀರ್ ಹೋಟೆಲ್ ನ ಅಡುಗೆಕೊಣೆಗೆ ಓಡಿದ್ದಾನೆ. ಆದರೂ ಬೀಡದ ಹಂತಕರು ಜಮೀರನನ್ನು ಹಿಡಿದು ಹರಿತವಾದ ಮಚ್ಚಿನಿಂದ ಕುತ್ತಿಗೆಗೆ ಹೊಡೆದಿದ್ದಾರೆ. ಅಷ್ಟರಲ್ಲಿ ಹೋಟೆಲ್ ಮಾಲೀಕ ಗಾಬರಿಯಿಂದ ಓಡಿ ಹೋಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ:
ಕಳೆದ ಒಂದೂವರೆ ವರ್ಷಗಳ ಹಿಂದೆ ಜಮೀರನನ್ನು ಹಣದ ಆಸೆಗೆ ಅಪಹರಣ ಮಾಡಲಾಗಿತ್ತು. ನಂತರ ಮೂವತ್ತು ಲಕ್ಷ ರೂ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು. ಆ ವೇಳೆ ಸಿನಿಮಿಯ ರೀತಿಯಲ್ಲಿ ಮುಂಡಗೋಡ ಪೊಲೀಸರು ಅಪಹರಣಕಾರರನ್ನ ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
ಸ್ಥಳಕ್ಕೆ ಇಲ್ಲಿನ ಪೊಲೀಸರು ದೌಡು: ಘಟನೆಯ ಮಾಹಿತಿ ತಿಳಿದ ತಕ್ಷಣ ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಾರವಾರ ಆಸ್ಪತ್ರೇಗೆ ರವಾನಿಸಿದ್ದಾರೆ. ಸ್ಥಳಕ್ಕೆ ಜಿಲ್ಲಾ ವರಿಷ್ಠಾಧಿಕಾರಿ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು.



