April 26, 2026
Sunday, April 26, 2026
spot_img

CINE | ಮತ್ತೆ ಹಿಟ್ ಆಯ್ತು ಅಕ್ಷಯ್-ಪ್ರಿಯದರ್ಶನ್ ಜೋಡಿ: ‘ಭೂತ್ ಬಂಗ್ಲ’ 100 ಕೋಟಿ ಕ್ಲಬ್ ಗೆ ಎಂಟ್ರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನ ಕಾಮಿಡಿ-ಹಾರರ್ ಜಾನರ್‌ನಲ್ಲಿ ಪ್ರೇಕ್ಷಕರನ್ನು ಮತ್ತೆ ರಂಜಿಸಿರುವ ಅಕ್ಷಯ್ ಕುಮಾರ್ ಹಾಗೂ ನಿರ್ದೇಶಕ ಪ್ರಿಯದರ್ಶನ್ ಕಾಂಬಿನೇಷನ್ ‘ಭೂತ್ ಬಂಗ್ಲ’ ಸಿನಿಮಾ 9 ದಿನಗಳಲ್ಲಿ 100 ಕೋಟಿ ಕ್ಲಬ್ ಸೇರಿದೆ.

ಬಿಡುಗಡೆಯಾದ 9ನೇ ದಿನವಾದ ಶನಿವಾರ ಚಿತ್ರ 10.75 ಕೋಟಿ ರೂ. ಗಳಿಸಿದ್ದು, ಮೊದಲ ವಾರದಲ್ಲಿ 84.40 ಕೋಟಿ ರೂ. ಸಂಗ್ರಹಿಸಿತ್ತು. ಇದರೊಂದಿಗೆ ಭಾರತದ ಒಟ್ಟು ಕಲೆಕ್ಷನ್ 100.90 ಕೋಟಿ ರೂ. ತಲುಪಿದೆ. ವಿದೇಶಗಳಲ್ಲಿ ಸಹ ಉತ್ತಮ ಪ್ರದರ್ಶನ ಕಂಡು, ಒಟ್ಟಾರೆ ವಿಶ್ವವ್ಯಾಪಿ ಗಳಿಕೆ 135 ಕೋಟಿ ರೂ. ಮೀರಿದೆ.

ಇದನ್ನೂ ಓದಿ:

ಅಕ್ಷಯ್ ಜೊತೆ ಟಬು, ವಾಮಿಕಾ ಗಬ್ಬಿ, ಮಿಥಿಲಾ ಪಾಲ್ಕರ್ ಮತ್ತು ರಾಜ್‌ಪಾಲ್ ಯಾದವ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಏಕ್ತಾ ಕಪೂರ್ ಮತ್ತು ಶೋಭಾ ಕಪೂರ್ ನಿರ್ಮಿಸಿರುವ ಈ ಚಿತ್ರ ತಾಂತ್ರಿಕ ಕಾರಣಗಳಿಂದ ವಿಳಂಬವಾಗಿ ಬಿಡುಗಡೆಯಾಗಿತ್ತು. ಮಿಶ್ರ ವಿಮರ್ಶೆಗಳ ನಡುವೆಯೂ ಪ್ರೇಕ್ಷಕರ ಉತ್ತಮ ಪ್ರತಿಕ್ರಿಯೆಯಿಂದ ಚಿತ್ರದ ಕಲೆಕ್ಷನ್ ಮುಂದುವರಿಯುವ ನಿರೀಕ್ಷೆಯಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !