October 10, 2026
Saturday, October 10, 2026
spot_img

ಶ್ವೇತಭವನದಲ್ಲಿ ‘ಗುಂಡಿನ ಆತಂಕ’ | ದಾಳಿಕೋರ ಅರೆಸ್ಟ್: ಸೀಕ್ರೆಟ್ ಸರ್ವಿಸ್ ಕೆಲಸ ಅದ್ಭುತವಾಗಿದೆ ಎಂದ ಟ್ರಂಪ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶ್ವೇತಭವನದ ಸಮೀಪ ನಡೆದ ವಾರ್ಷಿಕ ಔತಣಕೂಟದ ವೇಳೆ ಗುಂಡಿನ ದಾಳಿ ಸಂಭವಿಸಿದ ಘಟನೆಯ ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭದ್ರತಾ ಪಡೆಗಳ ಕಾರ್ಯಾಚರಣೆಯನ್ನು ಶ್ಲಾಘಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತವಾದ ಸೀಕ್ರೆಟ್ ಸರ್ವಿಸ್ ಮತ್ತು ಕಾನೂನು ಜಾರಿ ಸಂಸ್ಥೆಗಳು ಶಂಕಿತನನ್ನು ಬಂಧಿಸಿರುವುದಾಗಿ ಅವರು ತಿಳಿಸಿದ್ದಾರೆ.

ಟ್ರಂಪ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿ, ಭದ್ರತಾ ಪಡೆಗಳು ಅತ್ಯಂತ ವೇಗವಾಗಿ ಮತ್ತು ಧೈರ್ಯದಿಂದ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿವೆ ಎಂದು ಹೇಳಿದ್ದಾರೆ. ಘಟನೆಯ ವೇಳೆ ಹೋಟೆಲ್ ಬಳಿ ಗುಂಡಿನ ಸದ್ದು ಕೇಳಿಬಂದಿದ್ದು, ಗಣ್ಯರನ್ನು ತಕ್ಷಣ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ಇದನ್ನೂ ಓದಿ:

ಶಂಕಿತ ದಾಳಿಕೋರನನ್ನು ಬಂಧಿಸಲಾಗಿದ್ದು, ಈ ಘಟನೆಯ ನಂತರ ಶ್ವೇತಭವನ ಸುತ್ತಮುತ್ತ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

ಟ್ರಂಪ್ ಮುಂದುವರೆದು, ಕಾರ್ಯಕ್ರಮವನ್ನು ಮುಂದುವರಿಸಲು ತಾವು ಸೂಚಿಸಿದ್ದರೂ ಅಂತಿಮ ನಿರ್ಧಾರವನ್ನು ಅಧಿಕಾರಿಗಳಿಗೆ ಬಿಟ್ಟಿರುವುದಾಗಿ ಹೇಳಿದ್ದಾರೆ. ಈ ಔತಣಕೂಟವನ್ನು ಮುಂದಿನ 30 ದಿನಗಳಲ್ಲಿ ಮರು ಆಯೋಜಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಈ ಘಟನೆಯಿಂದ ಅಮೆರಿಕದ ರಾಜಕೀಯ ವಲಯದಲ್ಲಿ ಆತಂಕ ಹೆಚ್ಚಿದ್ದು, ಭದ್ರತಾ ವ್ಯವಸ್ಥೆಯ ಬಗ್ಗೆ ಮರುಪರಿಶೀಲನೆ ನಡೆಯುತ್ತಿದೆ.

Must Read