June 18, 2026
Thursday, June 18, 2026
spot_img

Cool Summer Recipe | ಇವತ್ತು ಈ ಮ್ಯಾಂಗೋ ಫಲೂದ ತಿಂದ್ರೆ ನಾಳೆನೂ ಇದೇ ಬೇಕು ಅಂತೀರ

ಬೇಸಿಗೆಯ ಬಿಸಿಲಿಗೆ ಕ್ಷಣಾರ್ಧದಲ್ಲಿ ಕೂಲ್ ಫೀಲ್ ಕೊಡೋ ಸಿಹಿ ಡೆಸರ್ಟ್ ಅಂದ್ರೆ ಮ್ಯಾಂಗೋ ಫಲೂದ. ಒಂದೇ ಗ್ಲಾಸ್‌ನಲ್ಲಿ ಸಿಗೋ ಸ್ಪೆಷಲ್ ಟ್ರೀಟ್ ಇದು. ಮನೆದಲ್ಲೇ ತುಂಬಾ ಸುಲಭವಾಗಿ ಮಾಡಬಹುದು.

ಬೇಕಾಗುವ ಪದಾರ್ಥಗಳು:

ಚೆನ್ನಾಗಿ ಹಣ್ಣಾದ ಮಾವಿನ ಹಣ್ಣು – 2
ತಣ್ಣನೆಯ ಹಾಲು – 2 ಕಪ್
ಸಬ್ಜಾ ಬೀಜ – 2 ಚಮಚ
ಫಾಲೂದ ಸೇವ್ / ವರ್ಮಿಸೆಲ್ಲಿ – 1 ಕಪ್ (ಬೇಯಿಸಿದ್ದು)
ಸಕ್ಕರೆ – 2 ರಿಂದ 3 ಚಮಚ (ರುಚಿಗೆ ತಕ್ಕಷ್ಟು)
ವೆನಿಲ್ಲಾ ಅಥವಾ ಮ್ಯಾಂಗೋ ಐಸ್‌ಕ್ರೀಮ್ – 2 ಸ್ಕೂಪ್
ಪಿಸ್ತಾ / ಬಾದಾಮಿ ತುಂಡುಗಳು – 2 ಚಮಚ
ಐಸ್ ಕ್ಯೂಬ್ಸ್ – ಸ್ವಲ್ಪ

ಮಾಡುವ ವಿಧಾನ:

ಮೊದಲು ಸಬ್ಜಾ ಬೀಜವನ್ನು 10 ನಿಮಿಷ ನೀರಿನಲ್ಲಿ ನೆನೆಸಿಡಿ. ಅದು ಚೆನ್ನಾಗಿ ಉಬ್ಬಿದ ಮೇಲೆ ಪಕ್ಕಕ್ಕೆ ಇಡಿ. ಬಳಿಕ ಫಾಲೂದ ಸೇವ್ ಅನ್ನು ಬೇಯಿಸಿ, ತಣ್ಣೀರಿನಲ್ಲಿ ತೊಳೆದು ಸಿದ್ಧವಾಗಿರಿಸಿ.

ಈಗ ಮಿಕ್ಸಿ ಜಾರ್‌ಗೆ ಮಾವಿನ ಹಣ್ಣಿನ ತಿರುಳು ಮತ್ತು ಸಕ್ಕರೆ ಹಾಕಿ ನುಣ್ಣಗೆ ರುಬ್ಬಿ ಪ್ಯೂರಿ ತಯಾರಿಸಿಕೊಳ್ಳಿ.

ಒಂದು ಉದ್ದ ಗ್ಲಾಸ್ ತೆಗೆದುಕೊಂಡು ಮೊದಲು ಮಾವಿನ ಪ್ಯೂರಿ, ನಂತರ ಸಬ್ಜಾ ಬೀಜ, ಆಮೇಲೆ ಫಾಲೂದ ಸೇವ್, ಬಳಿಕ ತಣ್ಣನೆಯ ಹಾಲು ಸೇರಿಸಿ. ಮೇಲೆ ಒಂದು ಐಸ್‌ಕ್ರೀಮ್ ಸ್ಕೂಪ್ ಹಾಕಿ.

ಕೊನೆಯಲ್ಲಿ ಮಾವಿನ ಚೂರುಗಳು, ಪಿಸ್ತಾ-ಬಾದಾಮಿ ಹಾಕಿ ಅಲಂಕರಿಸಿದರೆ ರುಚಿಕರವಾದ ಕೂಲ್ ಕೂಲ್ ಮ್ಯಾಂಗೋ ಫಲೂದ ರೆಡಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !