January19, 2026
Monday, January 19, 2026
spot_img

Good or Bad | ಹಸಿ ತರಕಾರಿ ತಿನ್ನೋದು ಆರೋಗ್ಯಕ್ಕೆ ಒಳ್ಳೆದ? ಕೆಟ್ಟದ್ದ?

ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸುವವರು ಹಸಿ ತರಕಾರಿ ಮತ್ತು ಸೊಪ್ಪನ್ನು ತಿನ್ನುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ತೂಕ ಇಳಿಸಿಕೊಳ್ಳಲು, ದೇಹಕ್ಕೆ ಹೆಚ್ಚು ಪೋಷಕಾಂಶಗಳನ್ನು ಪಡೆಯಲು ಹಸಿರು ಈರುಳ್ಳಿ, ಟೊಮ್ಯಾಟೊ, ಸೌತೆಕಾಯಿ ಮುಂತಾದ ತರಕಾರಿಗಳನ್ನು ನೇರವಾಗಿ ತಿನ್ನುತ್ತಾರೆ. ಅನೇಕರು ಬೇಯಿಸಿದರೆ ಪೌಷ್ಠಿಕಾಂಶ ಕಡಿಮೆಯಾಗುತ್ತದೆ ಎಂದು ನಂಬುವುದರಿಂದ ಹಸಿಯಾಗಿ ತಿನ್ನುವುದು ಒಳ್ಳೆಯದು ಎಂದು ಭಾವಿಸುತ್ತಾರೆ.

ಆದರೆ ತಜ್ಞರ ಪ್ರಕಾರ ಎಲ್ಲಾ ತರಕಾರಿಗಳನ್ನು ಹಸಿಯಾಗಿ ಸೇವಿಸುವುದು ಆರೋಗ್ಯಕರವಲ್ಲ. ಹಸಿ ತರಕಾರಿಗಳು ಜೀರ್ಣಾಂಗ ವ್ಯವಸ್ಥೆಗೆ ಹಾನಿ ಮಾಡುವ ಸಾಧ್ಯತೆ ಇದೆ ಮತ್ತು ಗಂಭೀರ ಕಾಯಿಲೆಗಳ ಅಪಾಯವನ್ನೂ ಹೆಚ್ಚಿಸುತ್ತದೆ. ಆಯುರ್ವೇದದಲ್ಲಿಯೂ ಸಹ ಎಲ್ಲಾ ಪದಾರ್ಥಗಳನ್ನು ಹಸಿಯಾಗಿ ಸೇವಿಸಬಾರದು ಎಂದು ಹೇಳಲಾಗಿದೆ.

ಹಣ್ಣುಗಳು, ಬಾದಾಮಿ, ಗೋಡಂಬಿ, ಒಣದ್ರಾಕ್ಷಿ ಮತ್ತು ಸಲಾಡ್‌ಗಳನ್ನು ಹಸಿಯಾಗಿ ತಿನ್ನಬಹುದು. ಆದರೆ ತರಕಾರಿಗಳನ್ನು ಬೇಯಿಸಿ ಸೇವಿಸುವುದು ಉತ್ತಮ. ಬಿಸಿ ಆಹಾರವು ಜೀರ್ಣಕ್ರಿಯೆಯನ್ನು ಸುಧಾರಿಸುವುದರ ಜೊತೆಗೆ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ ಮತ್ತು ದೇಹಕ್ಕೆ ಪೋಷಕಾಂಶಗಳನ್ನು ಸರಿಯಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ.

ಹಸಿ ತರಕಾರಿಗಳು ಹೆಚ್ಚು ಫೈಬರ್ ಮತ್ತು ನೈಸರ್ಗಿಕ ಪೌಷ್ಠಿಕಾಂಶಗಳನ್ನು ಒದಗಿಸಿದರೂ, ಋತುಮಾನಕ್ಕೆ ಅನುಗುಣವಾಗಿ ಆಹಾರ ಪದ್ಧತಿಯನ್ನು ಅನುಸರಿಸುವುದು ಮುಖ್ಯ. ಚಳಿಗಾಲದಲ್ಲಿ ಜೀರ್ಣಾಂಗ ವ್ಯವಸ್ಥೆ ನಿಧಾನಗತಿಯಲ್ಲಿ ಕೆಲಸ ಮಾಡುವುದರಿಂದ ಬೇಯಿಸಿದ ಆಹಾರವೇ ಉತ್ತಮ. ಮಳೆಗಾಲದಲ್ಲಿ ವೈರಸ್ ಮತ್ತು ಬ್ಯಾಕ್ಟೀರಿಯಾ ಸಕ್ರಿಯವಾಗಿರುವುದರಿಂದ ಹಸಿಯಾಗಿ ತಿನ್ನುವುದು ಅಪಾಯಕಾರಿಯಾಗಿದೆ. ತರಕಾರಿಗಳನ್ನು ಚೆನ್ನಾಗಿ ತೊಳೆದು ಬೇಯಿಸಿ ಸೇವಿಸಿದರೆ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದು.

ಹಸಿ ತರಕಾರಿಗಳಲ್ಲಿ ಪೋಷಕಾಂಶಗಳಿದ್ದರೂ, ಎಲ್ಲವನ್ನೂ ಹಸಿಯಾಗಿ ತಿನ್ನುವುದು ಸರಿಯಲ್ಲ. ಋತುಮಾನ, ದೇಹದ ಸ್ವಭಾವ ಮತ್ತು ಆರೋಗ್ಯದ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಬೇಯಿಸಿದ ತರಕಾರಿಗಳನ್ನು ಸೇವಿಸುವುದು ಉತ್ತಮ ಆಯ್ಕೆ. ಹೀಗೆ ಮಾಡಿದರೆ ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಪಡೆಯುವುದರ ಜೊತೆಗೆ ಆರೋಗ್ಯಕ್ಕೂ ಹಾನಿಯಾಗದಂತೆ ನೋಡಿಕೊಳ್ಳಬಹುದು.

Must Read

error: Content is protected !!