October 15, 2026
Thursday, October 15, 2026
spot_img

ರಾಜ್ಯದ ಶಾಲೆಗಳ ಅಸೆಂಬ್ಲಿಯಲ್ಲಿ ಇನ್ಮುಂದೆ ದಿನವೂ ನ್ಯೂಸ್‌ ಪೇಪರ್‌ ಓದೋದು ಕಡ್ಡಾಯವಂತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಕ್ಕಳಿಗೆ ರಾಜ್ಯದಲ್ಲಿ ಏನು ನಡೀತಿದೆ, ಯಾಕೆ ನಡೀತಿದೆ ಎನ್ನುವ ಮಾಹಿತಿ ತಿಳಿದಿರಬೇಕು. ಸಾಮಾನ್ಯ ಜ್ಞಾನ ಹೆಚ್ಚಿಸಲು ಹಾಗೂ ಇತ್ತೀಚಿನ ವಿಷಯಗಳನ್ನು ತಿಳಿದುಕೊಳ್ಳುವ ಸಲುವಾಗಿ ಶಾಲೆಗಳಲ್ಲಿ ಇನ್ಮುಂದೆ ದಿನಪತ್ರಿಕೆಯನ್ನು ಓದುವುದು ಕಡ್ಡಾಯವಾಗಿದೆ.

ಹೌದು, ರಾಜ್ಯದ ಎಲ್ಲ ಶಾಲೆಗಳಲ್ಲಿ ಅಸೆಂಬ್ಲಿ ವೇಳೆ ನ್ಯೂಸ್‌ ಪೇಪರ್‌ ಓದುವುದು ಕಡ್ಡಾಯವಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

ಪ್ರಾರ್ಥನೆ ಮುಗಿದ ತಕ್ಷಣ ನಿತ್ಯವೂ ಹತ್ತರಿಂದ ಹದಿನೈದು ನಿಮಿಷಗಳ ಕಾಲ ನ್ಯೂಸ್‌ಪೇಪರ್‌ನ್ನು ಓದಬೇಕಾಗುತ್ತದೆ. ಎಲ್ಲ ಮಕ್ಕಳಿಗೂ ಕೇಳುವಂತೆ ಒಬ್ಬ ವಿದ್ಯಾರ್ಥಿ ಜೋರಾಗಿ ಹೆಡ್‌ಲೈನ್‌ಗಳನ್ನು ಓದಬಹುದಾಗಿದೆ. ರಾಜ್ಯದ ಸರ್ಕಾರಿ, ಅನುದಾನಿನ ಹಾಗೂ ಖಾಸಗಿ ಮತ್ತು ಶಾಲೆಗಳು ಸೇರಿದಂತೆ ಎಲ್ಲಾ ರೀತಿಯ ಶಾಲೆಗಳಿಗೂ ಅನ್ವಯವಾಗುತ್ತದೆ.

ಹಲವು ಶಾಲೆಗಳಲ್ಲಿ ವರ್ಷಗಳಿಂದ ಈ ಅಭ್ಯಾಸ ಜಾರಿಯಲ್ಲಿದೆ. ಮಕ್ಕಳು ನಾಡಗೀತೆ, ರಾಷ್ಟ್ರಗೀತೆಯ ನಂತರ ಪೇಪರ್‌ ಓದಿ ಅಸೆಂಬ್ಲಿಯನ್ನು ಮುಗಿಸಲಾಗುತ್ತದೆ. ಮಕ್ಕಳು ಅಷ್ಟು ಜನರೆದುರು ಪೇಪರ್‌ ಓದಿದರೆ ಅವರಲ್ಲಿಯೂ ಕಾನ್ಫಿಡೆನ್ಸ್‌ ಬೂಸ್ಟ್‌ ಆಗುತ್ತದೆ. ಈಗಿನ ಮಕ್ಕಳಿಗೆ ಫೋನ್‌ನಲ್ಲಿ ಅತಿಯಾದ ಆಸಕ್ತಿ ಇದೆ. ಇದನ್ನು ತಪ್ಪಿಸಿ ಓದಿನಲ್ಲಿ ಆಸಕ್ತಿ ಮೂಡಿಸಬೇಕಿರುವ ಕಾರಣ ಸರ್ಕಾರ ಈ ರೀತಿ ಮಾಡಿದೆ.

Must Read